ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜು ಮೂಡಬಿದಿರೆ ಇಲ್ಲಿ ದಿನಾಂಕ 18 9 2024 ರಂದು ಬೆಳಿಗ್ಗೆ 11.35 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಸ್ವಾಮೀಜಿಯವರು ಪಾವನ ಸಾನಿಧ್ಯವಹಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ದುಶ್ಚಟಗಳಿಗೆ ವಿದ್ಯಾರ್ಥಿಗಳು ಒಳಗಾಗಬಾರದು ಹಾಗೆ ಏನಾದರೂ ಒಳಗಾದರೆ ಅವರ ಜೀವನ ಅತ್ಯಂತ ಕಷ್ಟಮಯವಾಗಿರುತ್ತದೆ ತನ್ನ ಅರೋಗ್ಯ ಕೆಡುದಲ್ಲ ದೆ ಪರಿಸರ ದ ಜನರಲ್ಲಿಅಪ ನಂಬಿಕೆ ಆವಿಶ್ವಾಸ ಉಂಟಾಗಿ ಜೀವನ ದುಃಖ್ಖ ಮಯ ವಾಗುದು ವಿದ್ಯಾರ್ಥಿ ಜೀವನದಲ್ಲಿ ಉತ್ತಮವಾದುದನ್ನೇ ಅಳವಡಿಸಿಕೊಳ್ಳಬೇಕೆಂದು ನುಡಿದರು ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಯವರಾದ ಶ್ರೀಮತಿ ಸುನಿತಾ ನಾಯಕ್ ಇವರು ಉಪ ಸ್ಥಿ ತರಿದ್ದರು ಅವರು ಕಾರ್ಯಕ್ರಮದ ಪ್ರಸ್ತಾವನೆ ಗೈದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾಕ್ಟರ್ ಪ್ರಭಾಕರ್ ಯೂನಿವರ್ಸಿಟಿ ಕಾಲೇಜ್ ಮಂಗಳೂರು ಇವರು ಮಾತನಾಡುತ್ತಾ ದುಶ್ಚಟಗಳ ಪರಿಣಾಮ ಮತ್ತು ಅದರಿಂದ ಉಂಟಾಗುವ ತೊಂದರೆಗಳ ಬಗ್ಗೆ ಉದಾಹರಣೆ ಸಹಿತ ಮನ ಮುಟ್ಟು ವಂತೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಬಾಹುಬಲಿ ಪ್ರಸಾದ್ ಇವರು ಹಾಗೂ ಜೆಸ್ಸಿಮಿನೆಜಸ್ ಮೂಡಬಿದರೆ. ಅರುಣ್ ಶೆಟ್ಟಿ ಮೂಡಬಿದಿರೆ. ಮಮತಾ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು ಕಾಲೇಜಿನ ಪ್ರಾಂಶುಪಾಲರು ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಅನಿತಾ ಬಲ್ಲಾಳ್ ಇವರು ಸ್ವಾಗತಿಸಿದರು. ಮಮತಾ ಇವರು ಕಾರ್ಯಕ್ರಮ ನಿರೂಪಿಸಿದರು ಸೌಮ್ಯಶ್ರೀ ಇವರು ಧನ್ಯವಾದ ಸಮರ್ಪಿಸಿದರು
ಮೂಡಬಿದಿರೆ:ಸ್ವಸ್ತಿಶ್ರೀ ಜೈನ ವಸತಿ ಪದವಿ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ
RELATED ARTICLES