Sunday, March 23, 2025
Homeಮೂಡುಬಿದಿರೆಮೂಡುಬಿದಿರೆ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ...

ಮೂಡುಬಿದಿರೆ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಮೂರನೇ ಜಿಲ್ಲಾ ಸಮ್ಮೇಳನ

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೇತೃತ್ವದಲ್ಲಿ ಮೂರನೇ ಜಿಲ್ಲಾ ಸಮ್ಮೇಳನ ಮೂಡುಬಿದಿರೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದಿನಾಂಕ: 23.11.2024 ರ ಶನಿವಾರ ಮೂಡುಬಿದಿರೆಯ ಕನ್ನಡ ಭವನದಲ್ಲಿ ಈ ಸಮ್ಮೇಳನ ನಡೆಯಲಿದೆ.

ಮೂಡುಬಿದಿರೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾ ಸಮ್ಮೇಳನ ನಡೆಯುತ್ತಿದೆ ಎಂದು ಹೇಳಲು ತುಂಬಾ ಸಂತೋಷವಾಗುತ್ತಿದೆ. ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘ1986-87 ದಲ್ಲಿ ಸ್ಥಾಪನೆಯಾದ ರಾಜ್ಯಮಟ್ಟದ ಶಿಕ್ಷಕ ಸಂಘಟನೆಯಾಗಿದೆ.

ಶ್ರೀ ಪುಟ್ಟಸಿದ್ದ ಶೆಟ್ಟರು ಮತ್ತು ಶ್ರೀ ಲಕ್ಷ್ಮಣರು ಮುಂತಾದ ಹಿರಿಯ ಶಿಕ್ಷಕ ನಾಯಕರಿಂದ ರಾಜ್ಯಮಟ್ಟದಲ್ಲಿ ಸ್ಥಾಪನೆಯಾದ ಈ ಸಂಘಟನೆ ಶ್ರೀ ಶಂಕರಪ್ಪ ದಾಸರಹಳ್ಳಿ ಅವರು ರಾಜ್ಯಾಧ್ಯಕ್ಷರಾಗಿರುವ ಸಂದರ್ಭದಲ್ಲಿ ರಾಜ್ಯವ್ಯಾಪಿ ಸಹ ಶಿಕ್ಷಕ ಸಂಘಟನೆಯನ್ನು ಜಿಲ್ಲಾ ಮಟ್ಟದಲ್ಲಿ ಮತ್ತು ತಾಲೂಕು ಮಟ್ಟದಲ್ಲಿ ವಿಸ್ತರಿಸಿದರು.

2009 ರಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಎಚ್. ಕೆ. ಮಂಜುನಾಥ್ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಬಲಿಷ್ಠ ಶಿಕ್ಷಕ ಸಂಘಟನೆಯಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಳೆದಿರುವುದನ್ನು, ರಾಜ್ಯ ಸರಕಾರದ ಮಾನ್ಯತೆ ಪಡೆದ ರಾಜ್ಯಮಟ್ಟದ ಶಿಕ್ಷಕ ಸಂಘಟನೆಯಾಗಿ ಬೆಳೆದಿರುವುದನ್ನು ನಾವೆಲ್ಲ ಗಮನಿಸಿದ್ದೇವೆ.

ಪ್ರಸ್ತುತ ರಾಜ್ಯಾಧ್ಯಕ್ಷರಾಗಿ ಶ್ರೀ ಸಿದ್ದಬಸಪ್ಪ ಅವರು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಮು ಗೂಗವಾಡ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಕುಂದಾಪುರದ ಶ್ರೀ ರಂಗಪ್ಪಯ್ಯ ಹೊಳ್ಳ, ಮಂಗಳೂರಿನ ಶ್ರೀ ವೆಂಕಯ್ಯ ಶೆಟ್ಟಿಗಾರ್,ಬೆಳ್ತಂಗಡಿ ತಾಲೂಕಿನ ಉಜಿರೆಯ ಶ್ರೀ ವೆಂಕಪ್ಪಯ್ಯ ಕಾರಂತ, ಪುಂಜಾಲಕಟ್ಟೆ ಶ್ರೀ ರಾಮಣ್ಣ ಶೆಟ್ಟಿ, ಉಡುಪಿಯ ಶ್ರೀ ಚಂದ್ರಶೇಖರ ಅಡಿಗ, ಬಂಟ್ವಾಳದ ಶ್ರೀ ಸುಭಾಶ್ಚಂದ್ರ ಕಣ್ವ ತೀರ್ಥ, ಕಾರ್ಕಳ ತಾಲೂಕಿನ ಶ್ರೀ ಬೈಲೂರು ಭಾಸ್ಕರ್ ಶೆಟ್ಟಿ, ಮೂಡುಬಿದಿರೆಯ ಶ್ರೀ ರಾಮಕೃಷ್ಣ ಶಿರೂರು, ಮಂಗಳೂರಿನ ಶ್ರೀ ಸ್ಟ್ಯಾನಿ ತಾವ್ರೊ ಮುಂತಾದವರ ತ್ಯಾಗ ಮತ್ತು ಪರಿಶ್ರಮದ ಫಲವಾಗಿ ಈ ಸಂಘ ಬೆಳೆದು ಬಂದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕ್ರಿಯಾಶೀಲ ಸಹ ಶಿಕ್ಷಕರಾಗಿರುವ ಶ್ರೀ ಮಹಮ್ಮದ್ ರಿಯಾಜ್ ಅವರು ಅದ್ಭುತ ಸಂಘಟಕರು ಮತ್ತು ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುವ, ಇಲಾಖಾ ಅಧಿಕಾರಿಗಳ ಜೊತೆಯಲ್ಲಿ ಉತ್ತಮ ಭಾಂದವ್ಯವನ್ನು ಇಟ್ಟುಕೊಂಡು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ನಾಯಕಗಿರುತ್ತಾರೆ.

ಪ್ರಸ್ತುತ ಕಾರ್ಯದರ್ಶಿಯಾಗಿರುವ ಶ್ರೀ ಮಾರ್ಕ್ ಮೆಂಡೋನ್ಸಾ ಕ್ರಿಯಾಶೀಲ ಶಿಕ್ಷಕರಾಗಿದ್ದು ಶಿಕ್ಷಕರ ಸಮಸ್ಯೆಗಳನ್ನು ಗ್ರಹಿಸುವ ಮತ್ತು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡುವ ವಿಶಿಷ್ಟ ಗುಣವನ್ನು ಹೊಂದಿದವರು.

ಮೂಡುಬಿದಿರೆ ತಾಲೂಕಿನ ಸಹ ಶಿಕ್ಷಕ ಸಂಘದ ಇತಿಹಾಸವನ್ನು ಗಮನಿಸಿದಾಗ,
ಆ ಸಂದರ್ಭದಲ್ಲಿ ಬಾಬು ರಾಜೇಂದ್ರ ಪ್ರೌಢಶಾಲೆಯ ಶ್ರೀ ಜಗತ್ಪಾಲ ಭಂಗರು ಸಹ ಶಿಕ್ಷಕ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮುಂದೆ ಬೆಳವಾಯಿ ಎಸ್.ಎಂ.ಪಿ. ಪ್ರೌಢಶಾಲೆಯ ಶ್ರೀ ಸುಬ್ರಾಯರು , ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ಶ್ರೀ ವಸಂತರು, ಅಳಿಯೂರು ಸರಕಾರಿ ಪ್ರೌಢಶಾಲೆಯ ಶ್ರೀ ಮಹಾದೇವ ಅವರು ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಬೆಳುವಾಯಿ ಎಸ್. ಎಂ. ಪಿ. ಪ್ರೌಢಶಾಲೆಯ ಶ್ರೀ ದೇವದಾಸ ಕಿಣಿ ಮತ್ತು ಮೂಡುಬಿದಿರೆ ಪ್ರಾಂತ್ಯ ಸರಕಾರಿ ಪ್ರೌಢಶಾಲೆಯ ಶ್ರೀಮತಿ ಶಕುಂತಲಾ ಮೇಡಂ ಅವರು ಉಪಾಧ್ಯಕ್ಷರಾಗಿ ಈ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಹಾಗೆಯೇ ಶಿರ್ತಾಡಿ ಜವಾಹರಲಾಲ್ ನೆಹರು ಪ್ರೌಢಶಾಲೆಯ ಶ್ರೀ ಗೋವರ್ಧನ ಅವರು, ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯ ಶ್ರೀ ಶಂಕರ ನಾಯಕ್ ಅವರು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಸ್ತುತ ಮೂಡುಬಿದಿರೆ ತಾಲೂಕಿನ ಅಧ್ಯಕ್ಷರಾಗಿ ಶ್ರೀ ರಾಮಕೃಷ್ಣ ಶಿರೂರು, ಕಾರ್ಯದರ್ಶಿಯಾಗಿ ಶ್ರೀ ನಿತೇಶ್ ಬಲ್ಲಾಳ, ಕೋಶಾಧಿಕಾರಿಯಾಗಿ ಶ್ರೀ ಬಾಲಕೃಷ್ಣ ರೆಖ್ಯ, ರಾಜ್ಯ ಪರಿಷತ್ ಸದಸ್ಯರಾಗಿ ಶ್ರೀ ಗಂಗಾಧರ ಪಾಟೀಲ್, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಮತಿ
ಸೀಮಾ ನಾಯಕ್ ಮತ್ತು ನಾಮ ನಿರ್ದೇಶಿತ ಸದಸ್ಯರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಹೀಗೆ ತಾಲೂಕಿನ ಎಲ್ಲ ಸಹ ಶಿಕ್ಷಕರ ಸಹಕಾರದಿಂದ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ನಮ್ಮ ತಾಲೂಕಿನಲ್ಲಿ ಸಕ್ರಿಯವಾಗಿ ಬೆಳೆದು ಬಂದಿರುವುದು ತಮಗೆಲ್ಲ ತಿಳಿದ ವಿಚಾರವಾಗಿದೆ.

ನಿಮ್ಮೆಲ್ಲರ ಆಶೀರ್ವಾದದಿಂದ ಈ ಸಂಘಟನೆಯಲ್ಲಿ ತಾಲೂಕು ಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷನಾಗಿ,ಜಿಲ್ಲಾಧ್ಯಕ್ಷನಾಗಿ, ರಾಜ್ಯ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ನನಗೆ ಲಭಿಸಿರುವುದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ.

ಪ್ರಸ್ತುತ ಮೂಡುಬಿದಿರೆ ತಾಲೂಕು ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ಸಹ ಶಿಕ್ಷಕ ಸಂಘದ ಜಿಲ್ಲಾ ಸಮ್ಮೇಳನ ನಡೆಸುವ ಅವಕಾಶ ನಮಗೆ ಲಭಿಸಿದೆ.ಮೂಡುಬಿದಿರೆ ತಾಲೂಕಿನ ಸಮಸ್ತ ಶಿಕ್ಷಕ ಬಂಧುಗಳ ಸಂಪೂರ್ಣ ಸಹಕಾರದಿಂದ ಈ ಸಮ್ಮೇಳನ ಯಶಸ್ವಿಯಾಗಬೇಕಿದೆ. ಸಮ್ಮೇಳನದ ಯಶಸ್ವಿಗಾಗಿ ತಮ್ಮ ತನು ಮನ ಧನದ ಸಹಕಾರವನ್ನು ಬಯಸುತ್ತಿದ್ದೇವೆ. ಇದಕ್ಕೆ ಸಂಬಂಧಪಟ್ಟಂತೆ ಖರ್ಚು ವೆಚ್ಚಗಳ ಅಂದಾಜು ಪಟ್ಟಿಯನ್ನು ಮಾಡಲಾಗಿದೆ. ಸಂಘಟನೆಯ ಬಗ್ಗೆ ಗೌರವದ ಭಾವನೆಯನ್ನು ಹೊಂದಿರುವ ಆತ್ಮೀಯ ಶಿಕ್ಷಕ ಬಂಧುಗಳು ಆರ್ಥಿಕ ಸಹಕಾರವನ್ನು ನೀಡುವುದರ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕಾಗಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ.

RELATED ARTICLES
- Advertisment -
Google search engine

Most Popular