ಮೂಡುಬಿದಿರೆಯ ನಿಷ್ಠಾವಂತ ರೈತ ಮಿತ್ರ ಕೃಷಿ ಅಧಿಕಾರಿ ವಿ. ಎಸ್. ಕುಲಕರ್ಣಿ ಸನ್ಮಾನ

0
130

ಮೂಡುಬಿದಿರೆ: ಸ್ವ ಉದ್ಯೋಗಾಸಕ್ತ ಕೃಷಿಕರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ, ಆಗಮಿಸಿದ ಕೃಷಿಕರನ್ನು ತಾಳ್ಮೆ ಸಮಾಧಾನದಿಂದ ಕಷ್ಟಗಳನ್ನು ಆಲಿಸಿ, ಸಾಧ್ಯವಿದ್ದ ಎಲ್ಲ ಪರಿಹಾರಗಳನ್ನು ಒದಗಿಸಿದ 36 ವರ್ಷ ದಕ್ಷ ಅಧಿಕಾರಿಯಾಗಿದ್ದು ನಿವೃತ್ತಿ ಹೊಂದುತ್ತಿರುವ ವಿ. ಎಸ್. ಕುಲಕರ್ಣಿಯವರನ್ನು ಸನ್ಮಾನಿಸಿ ಅಧಿಕಾರಿ ಸಂಜೀವ ನಿಂಗಪ್ಪ ಗೌಡ, ಸಮಗ್ರ ಕೃಷಿಕ ಡಾ. ನಾಗರಾಜ ಶೆಟ್ಟಿ ಅಂಬೂರಿ, ಬ್ಯಾಂಕ್ ಆಫ್ ಬರೋಡದ ಹಿರಿಯ ಶಾಖಾ ಪ್ರಬಂಧಕ ಸಂತೋಷ್ ಕುಮಾರ್, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಕಾರ್ಯ ನಿರ್ವಹಣಾ ಅಧಿಕಾರಿ ಸಚಿನ್, ಕೃಷಿಕ ತಾಕೊಡೆ ಎಡ್ವರ್ಡ್ ರೆಬೆಲ್ಲೊ, ರೈತ ಮುಖಂಡ ಮನೋಹರ ಶೆಟ್ಟಿ, ಸ್ವಸ್ತಿಕ್ ರೊಟ್ಟಿಯ ಗೋಪಾಲ ಪೂಜಾರಿಯವರು ಅಭಿನಂದಿಸಿದರು.

ಮೂಡುಬಿದಿರೆ ಕೃಷಿ ವಿಚಾರ ವಿನಿಮಯ ಕೇಂದ್ರ ಹಾಗೂ ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಮೇ 30ರಂದು ನಡೆದ ಬೆಳುವಾಯಿ ಗ್ರಾಮೀಣ ಅಭಿವೃದ್ಧಿ ಸಮಿತಿಯ ಉದ್ಘಾಟನೆಯನ್ನು ನೆರವೇರಿಸಿದ ಪ್ರತಿಷ್ಠಾನದ ದ. ಕ. ಜಿಲ್ಲಾ ಟ್ರಸ್ಟ್ ಡಿ. ಸಂಪತ್ ಸಾಮ್ರಾಜ್ಯರವರು ಮಾತನಾಡಿ ಗ್ರಾಮೀಣ ಹಾಗೂ ಪೇಟೆಯ ಅಂತರ ಕಡಿಮೆಯಾಗಬೇಕು. ಹಳ್ಳಿಗಳು ಅಭಿವೃದ್ಧಿಗೊಂಡು  ಸ್ಮಾರ್ಟ್ ಹಳ್ಳಿಗಳಾಗಬೇಕು. ರಸ್ತೆ, ನೀರಾವರಿ, ಆಸ್ಪತ್ರೆಗಳ ಕೊರತೆ ನೀಗಿ ಹಳ್ಳಿಗಳಲ್ಲಿ ಉದ್ಯೋಗದ ಲಭ್ಯತೆ ಹೆಚ್ಚಿ ತಲಾ ಆದಾಯ ಹೆಚ್ಚಾಗಬೇಕು. ರೈತರು ಬೆಳೆದ ಬೆಳೆಗೆ ನೇರ ಗ್ರಾಹಕರು ಸಿಕ್ಕಿದರೆ ಹೆಚ್ಚಿನ ಆದಾಯವು ಸಾಧ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಬೆಳುವಾಯಿ ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿಯ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ದರೆಗುಡ್ಡೆ ಕೆಲ್ಲ ಕೆಲ್ಲಪುತ್ತಿಗೆ ಗುತ್ತಿನ ಸುಭಾಷ್ ಚಂದ್ರ ಚೌಟ, ಕಾರ್ಯದರ್ಶಿ ಪಡುಮಾರ್ನಾಡು ಜನೇಂದ್ರ ಹೆಗಡೆ, ಕೋಶಾಧಿಕಾರಿ ಸದಾನಂದ ನಾರಾವಿ ಅವರ ಪದ ಸ್ವೀಕಾರ ಸಮಾರಂಭವು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಗುಣಪಾಲ ಮುದ್ಯರು ವಂದಿಸಿದರು. ಕಾರ್ಯದರ್ಶಿ ಬಿ. ಅಭಯ ಕುಮಾರ್ ಸ್ವಾಗತಿಸಿದರು ಸದಾನಂದ ನಾರಾವಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here