ಮೂಡುಬಿದಿರೆ : ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಟ್ರಸ್ಟ್ ವತಿಯಿಂದ ಅಮೃತ ಮಹೋತ್ಸವದ ಪ್ರಯುಕ್ತ ಕಾಮದೇನು ಸಭಾಭವನದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಯಿತು.
ಹಿರಿಯರಾದ ಸುಂದರ ಪೂಜಾರಿ, ನಾರಾಯಣ ಪಿ.ಎಂ ಹಾಗೂ ಪದ್ಮನಾಭ ಸಾಲ್ಯಾನ್ ದಂಪತಿ ಸಹಿತ ಕಾರ್ಯಕ್ರಮ ಉದ್ಘಾಟಿಸಿದರು. ಕಜಂಪಾಡಿ ಸುಬ್ರಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಸಮಾಜ ಸುಧಾರಕ ನಾರಾಯಣ ಗುರುಗಳು ತಮ್ಮ ವ್ಯಕ್ತಿತ್ವ ಗುಣ ನಡತೆ ಜ್ಞಾನದಿಂದ ಬ್ರಹ್ಮಶ್ರೀ ಎಂಬ ಪದವಿಯನ್ನು ಪಡೆದವರು. ಕುಟುಂಬಕ್ಕೆ ಸಂಸ್ಕಾರ ನೀಡುವುದು ಅಗತ್ಯ. ಮನೆಯೇ ಮಂತ್ರಾಲಯವಾಗಬೇಕು ಮನಸ್ಸು ದೇವಾಲಯವಾಗಬೇಕು. ನಮ್ಮ ದೇಶ ಕುಟುಂಬದ ತಳಹದಿಯಿಂದಲೇ ಬೆಳೆದು ಬಂದಿದೆ. ನಾವು ಕಲಿಯುವ ಶಿಕ್ಷಣ ಕುಟುಂಬದಿಂದಲೇ ಆರಂಭವಾಗುತ್ತಿದೆ.
ಈ ನಿಟ್ಟಿನಲ್ಲಿ ಕುಟುಂಬವು ಸಮಾಜದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದರು. ಮಂಗಳೂರು ವಿಭಾಗ ಕುಟುಂಬ ಪ್ರಬೋಧನ್ ಸಂಯೋಜಕ ಗಜಾನನ ಪೈ ಮತ್ತು ಮಾಲತಿ ಪೈ ಅವರು, ಪ್ರಸ್ತುತ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳು ಅದಕ್ಕೆ ಪರಿಹಾರ ನಾವು ಮಾಡಬೇಕಾದ ಕರ್ತವ್ಯಗಳು ಕುರಿತು ಸಂವಾದ ನಡೆಸಿಕೊಟ್ಟರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಂಘದ ಅಧ್ಯಕ್ಷ, ವಕೀಲ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆವಹಿಸಿದ್ದರು.ಶಂಕರ ಕೋಟ್ಯಾನ್, ಮಾಲತಿ ಗೋಪಿನಾಥ್ ಉಪಸ್ಥಿತರಿದ್ದರು. ಅಮೃತ ಮಹೋತ್ಸವ ಸಮಿತಿ ಸಂಚಾಲಕ ಡಾ.ರಮೇಶ್ ಸ್ವಾಗತಿಸಿದರು. ಸುಶ್ಮಿತಾ ವಂದಿಸಿದರು. ಶ್ರೀರಾಜ್ ನಿರೂಪಿಸಿದರು.