Saturday, July 20, 2024
Homeಮೂಡುಬಿದಿರೆಸೌದಿ ಅರೇಬಿಯಾದಲ್ಲಿ ಅಗ್ನಿ ಅವಘಡ: ಮೂಡುಬಿದಿರೆ ಮೂಲದ ಮಗು ಸಾವು

ಸೌದಿ ಅರೇಬಿಯಾದಲ್ಲಿ ಅಗ್ನಿ ಅವಘಡ: ಮೂಡುಬಿದಿರೆ ಮೂಲದ ಮಗು ಸಾವು

ಮೂಡುಬಿದಿರೆ: ಸೌದಿ ಅರೇಬಿಯಾದ ದಮಾಮ್ ನಲ್ಲಿ ನಡೆದ ಬೆಂಕಿ ದುರಂತದಲ್ಲಿ ತುಳುನಾಡು ಮೂಲದ ಕುಟುಂಬವೊಂದರ ಮೂರು ವರ್ಷದ ಮಗುವೊಂದು ಸಾವನ್ನಪ್ಪಿದೆ. ದಮಾಮ್ ನ ಅದಮಾ ಎಂಬಲ್ಲಿನ ಲುಲು ಮಾಲ್ ಹಿಂಭಾಗದಲ್ಲಿರುವ ಹುಸೇನಿ ಕಂಪೌಂಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯಲ್ಲಿ ಕೋಟೆಬಾಗಿಲು ಖೀಲಾ ಸುನ್ನಿ ಜಾಮಿಯಾ ಮಸೀದಿ ಎದುರಿನ ಮನೆಯ ಶೇಖ್ ಫಹಾದ್ ಮತ್ತು ಅವರ ಕುಟುಂಬದ ಮಗು ಸಾವಿಗೀಡಾಗಿದೆ. ಫಹಾದ್ ಅವರ ಕುಟುಂಬ ಮಲಗಿದ್ದ ವೇಳೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಫಹಾದ್ ಅವರ ಮಗು ಸಾಯಿಕ್ ಶೇಖ್ ಉಸಿರುಗಟ್ಟಿ ಸಾವನ್ನಪ್ಪಿದೆ.

ಫಹಾದ್ ಅವರ ಪತ್ನಿ ಸಲ್ಮಾ ಖಾಝಿ ಮತ್ತು ಪುತ್ರ, 6 ವರ್ಷದ ಶಾಹಿದ್ ಶೇಖ್ ಹೊಗೆಯಿಂದ ಉಸಿರುಗಟ್ಟಿ ಅಸ್ವಸ್ಥರಾಗಿದ್ದಾರೆ. ಸಮೀಪದ ನಿವಾಸಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ಫಹಾದ್ ಅವರ ಕುಟುಂಬ ಈ ಕಟ್ಟಡದಲ್ಲಿ ವಾಸವಾಗಿತ್ತು ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular