ಮೂಡುಬಿದಿರೆ : ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಇದರ 38ನೇ ಅಂಗಸಂಸ್ಥೆ ಸಂಭ್ರಮದ ಉದ್ಘಾಟನೆ

0
33

ವರದಿ : ಮಂದಾರ ರಾಜೇಶ್ ಭಟ್

ಮೂಡುಬಿದಿರೆ : ಸ್ಥಳೀಯ ಶ್ರೀ ಗೋಪಾಲಕೃಷ್ಣ ದೇವಳದ ಪ್ರಾಂಗಣದಲ್ಲಿ ಫೆಬ್ರವರಿ 1ರ ಭಾನುವಾರ ಸಂಜೆ, ಕೂಟ ಮಹಾ ಜಗತ್ತು ಸಾಲಿಗ್ರಾಮ (ರಿ) ಸಂಸ್ಥೆಯ 38ನೇ ಅಂಗಸಂಸ್ಥೆಯ ಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವು ಅತ್ಯಂತ ವೈಭವದಿಂದ ನೆರವೇರಿತು. ಕೇಂದ್ರ ಸಂಸ್ಥೆಯ ಅಧ್ಯಕ್ಷರಾದ ಎಚ್. ಸತೀಶ್ ಹಂದೆಯವರು ದೀಪ ಪ್ರಜ್ವಲಿಸುವ ಮೂಲಕ ನೂತನ ಶಾಖೆಯನ್ನು ಉದ್ಘಾಟಿಸಿ, ಸಂಘಟನೆಯ ಏಳಿಗೆಗೆ ಶುಭ ಹಾರೈಸಿದರು.

ಒಗ್ಗಟ್ಟಿನ ಮಂತ್ರ ಮತ್ತು ಸಮಾಜದ ಪ್ರಗತಿ

​ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಡಾ. ಎನ್. ಸೋಮಶೇಖರ್ ಮಯ್ಯ ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, “ಯುವಶಕ್ತಿ ಸಮಾಜದ ಉಸಿರು, ಮಹಿಳೆಯರ ಸಹಭಾಗಿತ್ವ ಪ್ರಗತಿಯ ಸಂಕೇತ ಹಾಗೂ ಹಿರಿಯರ ಮಾರ್ಗದರ್ಶನವೇ ನಮ್ಮ ದಾರಿದೀಪ” ಎಂದರು. ಸಮಾಜದ ಆರ್ಥಿಕ, ಶೈಕ್ಷಣಿಕ ಮತ್ತು ವೈದ್ಯಕೀಯ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಸಂಘಟನೆಯು ಭದ್ರ ಬುನಾದಿಯಾಗಬೇಕು ಎಂದು ಅವರು ಕರೆ ನೀಡಿದರು.

ಗಣ್ಯರ ಉಪಸ್ಥಿತಿ ಮತ್ತು ಹಾರೈಕೆ

ಕೇಂದ್ರ ಸಂಸ್ಥೆಯ ಉಪಾಧ್ಯಕ್ಷರಾದ ಪಿ. ಸದಾಶಿವ ಐತಾಳರು ಶುಭಾಶಂಸನೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಮುಖರಾದ : CA ಚಂದ್ರಶೇಖರ ಐತಾಳ್ (ಉಪಾಧ್ಯಕ್ಷರು), ಸುರೇಶ್ ತುಂಗ (ಪ್ರಧಾನ ಕಾರ್ಯದರ್ಶಿ), ವಿಶ್ವನಾಥ ಹೊಳ್ಳ (ಸಂಘಟನಾ ಕಾರ್ಯದರ್ಶಿ) ಭಾರತಿ ಶ್ರೀಧರ್ ತುಂಬೆ ಮತ್ತು HK ಕುಮಾರ ಹೊಳ್ಳ (ಜೊತೆಕಾರ್ಯದರ್ಶಿಗಳು) ವಿಶ್ವನಾಥ ಸೋಮಯಾಜಿ (ಬಿಲಿಯನ್ ಫೌಂಡೇಷನ್ ಟ್ರಸ್ಟ್), ನೆರೆಯ ಬಂಟ್ವಾಳ, ಮಂಗಳೂರು, ಬೆಳ್ತಂಗಡಿ ಮತ್ತು ಪೊಳಲಿ ಅಂಗಸಂಸ್ಥೆಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದು , ನೈತಿಕ ಬೆಂಬಲ ಸೂಚಿಸಿದರು.

ನೂತನ ಪದಾಧಿಕಾರಿಗಳ ಪದಗ್ರಹಣ

ಕೇಂದ್ರದ ಅಧ್ಯಕ್ಷರಾದ ಎಚ್. ಸತೀಶ್ ಹಂದೆಯವರು ಸಂಸ್ಥೆಯ ನಿಬಂಧನೆಗಳನ್ನು ಹಸ್ತಾಂತರಿಸುವ ಮೂಲಕ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಘೋಷಿಸಿದರು : ಅಧ್ಯಕ್ಷರು: ಡಾ. ಎನ್. ಸೋಮಶೇಖರ್ ಮಯ್ಯ, ಗೌರವ ಅಧ್ಯಕ್ಷರು ಶ್ರೀ ರಾಮಕೃಷ್ಣ ಭಟ್ (ಆರ್.ಕೆ. ಎಂಟರ್ ಪ್ರೈಸಸ್), ಉಪಾಧ್ಯಕ್ಷರು ಚಂದ್ರಶೇಖರ್ ಮಯ್ಯ ಮತ್ತು ಅನಂತ ಪದ್ಮನಾಭ ಹೊಳ್ಳ ಕಾರ್ಯದರ್ಶಿ ಸುದರ್ಶನ್ ರಾವ್ ,ಖಜಾಂಚಿ ಶ್ರೀ ಜಯರಾಮ ರಾವ್, ಗೋಪಾಲಕೃಷ್ಣ ದೇವಳದ ಅನುವಂಶಿಕ ಮೊಕ್ತೇಸರರಾದ ಗುರು ಪ್ರಸಾದ್ ಹೊಳ್ಳ ಅವರು ಸಂಸ್ಥೆಯ ಮುಂದಿನ ಕಾರ್ಯಕ್ರಮಗಳಿಗೆ ದೇವಳದ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಸುಮಾರು 120ಕ್ಕೂ ಹೆಚ್ಚು ಕೂಟ ಬಂಧುಗಳು ಪಾಲ್ಗೊಂಡಿದ್ದ ಈ ಕಾರ್ಯಕ್ರಮವನ್ನು ಶ್ರೀ ಸುದರ್ಶನ್ ರಾವ್ ಅಚ್ಚುಕಟ್ಟಾಗಿ ನಿರೂಪಿಸಿದರು. ಚಂದ್ರಶೇಖರ್ ಮಯ್ಯ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಮಂಗಲಗೊಂಡಿತು.

LEAVE A REPLY

Please enter your comment!
Please enter your name here