ಮೂಡುಬಿದಿರೆ ಕುಲಾಲ ಸಂಘದ 19ನೇ ವಾರ್ಷಿಕ ಮಹಾಸಭೆ , ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ – ಸನ್ಮಾನ

0
76

ಮೂಡುಬಿದಿರೆ : ಕುಲಾಲ ಸಂಘ (ರಿ.) ಮೂಡುಬಿದಿರೆ ಇದರ 19ನೇ ವಾರ್ಷಿಕ ಮಹಾಸಭೆ , ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ – ಸನ್ಮಾನವು ಡಿಸೆಂಬರ್‌ 14, 2025 ನೇ ಆದಿತ್ಯವಾರ ಸಮಾಜ ಮಂದಿರ, ಮೂಡುಬಿದಿರೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್‌ ಕುಲಾಲ ಸಂಘ (ರಿ.) ಮೂಡಬಿದಿರೆ ಇವರು ವಹಿಸಲಿರುವರು. ಬಿ. ಉಗ್ಗಪ್ಪ ಮೂಲ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರು ಹಾಗೂ ನಿವೃತ್ತ ಪಂ. ಅಧಿಕಾರಿ ಉದ್ಘಾಟಿಸಲಿರುವರು.ಮುಖ್ಯ ಅತಿಥಿಗಳಾಗಿ ಧನಂಜಯ ಕುಲಾಲ್‌, ಡಾ. ಬಾಲಕೃಷ್ಣ ಕುಲಾಲ್‌ ಪಾಲ್ಗೊಳ್ಳಲಿರುವರು.

ಶ್ರೀ ಮಯೂರ್‌ ಉಳ್ಳಾಳ್‌ ಅಧ್ಯಕ್ಷರು , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘ (ರಿ.) ಮಂಗಳೂರು ಹಾಗೂ ಲ| ಅನಿಲ್‌ ದಾಸ್‌ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಕುಲಾಲ ಕುಂದಾಪುರ ಯುವ ವೇದಿಕೆ (ರಿ.) ಇವರು ಸನ್ಮಾನ ಸ್ವಿಕರಿಸಲಿರುವರು .

.

LEAVE A REPLY

Please enter your comment!
Please enter your name here