ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮಹೋತ್ಸವ ಸಂದರ್ಭ, ರಜತ ವರ್ಷಕ್ಕೆ ಪದಾರ್ಪಣೆಗೈದಿರುವ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ವತಿಯಿಂದ 24ನೇ ವರ್ಷದಲ್ಲಿ ತಯಾರಿಸಲಾದ ಶುದ್ಧ ಕುಂಕುಮವನ್ನು ದೇವಿಯ ಸನ್ನಿಧಿಗೆ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ಪದಾಧಿಕಾರಿಗಳು, ಸದಸ್ಯರು ಸಮರ್ಪಿಸಿದರು.
36 ಕೆಜಿ ಅರಶಿನ, 300 ಲಿಂಬೆಹುಳಿ ಮತ್ತು ನಿಗದಿತ ಪ್ರಮಾಣದಲ್ಲಿ ಪಟಿಕಾರ, ಬಿಳಿಕಾರ ಸಹಿತ ಆಗತ್ಯವಸ್ತುಗಳನ್ನು ಬಳಸಿ ಈ ಶುದ್ಧಕುಂಕುಮವನ್ನು ತಯಾರಿಸಲಾಗಿತ್ತು. 2002ರಲ್ಲಿ ಆಧ್ಯಕ್ಷೆಯಾಗಿದ್ದ ಜಯಂತಿ ಕೇಶವ ಆಚಾರ್ಯ ಅವರು ಧನಂಜಯ ಮೂಡುಬಿದಿರೆ ಅವರ ಸಲಹೆ-ಸಹಕಾರದಲ್ಲಿ ಸಾಹಿತಿ, ಸಂಸ್ಕೃತಿ ಚಿಂತಕಿ ಸುಮತಿ ಕೆ. ಸಿ. ಭಟ್ ಆದೂರು ಅವರ ನಿರ್ದೇಶನದಲ್ಲಿ ಶುದ್ಧ ಕುಂಕುಮ ತಯಾರಿಕೆಯ ಕಾರ್ಯಾಗಾರವನ್ನು ಏರ್ಪಡಿಸಿದ್ದು ಬಳಿಕ ಮಹಿಳಾ ಸಮಿತಿಯವರು ಅಯಾ ಅವಧಿಯ ಅಧ್ಯಕ್ಷರ ಹಿರಿತನದಲ್ಲಿ ಪ್ರತಿವರ್ಷ ದೇವಸ್ಥಾನದ ಮಹೋತ್ಸವ ಸಂದರ್ಭ ಶುದ್ಧ ಕುಂಕುಮ ತಯಾರಿಸಿ, ದೇವರಿಗೆ ಸಮರ್ಪಿಸುವ ಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ.