Wednesday, January 15, 2025
Homeಮೂಡುಬಿದಿರೆಮೂಡುಬಿದಿರೆ: ಸಾವಿರ ಕಂಬ ಬಸದಿ ಲಕ್ಷ ದೀಪೋತ್ಸವ

ಮೂಡುಬಿದಿರೆ: ಸಾವಿರ ಕಂಬ ಬಸದಿ ಲಕ್ಷ ದೀಪೋತ್ಸವ

ದೀಪೋತ್ಸವ ನಮ್ಮ ಅಜ್ಞಾನದ ಕತ್ತಲೆ ನಿವಾರಿಸಿ ಅಂತರಂಗ ಜ್ಞಾನದ ಅರಿವು ಮೂಡಿಸುವ ಹಬ್ಬ. ಎಲ್ಲರೊಳಗೂ ಉತ್ತಮ ಅರಿವು ಮೂಡಲಿ. ಸಾಹಿತ್ಯ ಸಂಸ್ಕೃತಿಯನ್ನು ಅರಾಧಿಸುವ ಮನಸು ನಮ್ಮದಾಗಲಿ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ನುಡಿದರು.
ಇತಿಹಾಸ ಪ್ರಸಿದ್ಧ ಮೂಡುಬಿದಿರೆ ಸಾವಿರಕಂಬ ಬಸದಿಯ ಲಕ್ಷ ದೀಪೋತ್ಸವ ಪ್ರಯಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನ ನೀಡಿದರು.
ಅಪೇಕ್ಷಾ ಪೂರ್ಣಚಂದ್ರ ಹಾಡಿದ ಅಪರಾಜಿತ ಶತಕದ ಪರಮಾಪರಂಜ್ಯೋತಿ ಧ್ವನಿ ಸುರುಳಿಯನ್ನು ಭಟ್ಟಾರಕ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಸಿತಾರ್ ವಾದಕ ಡಾ.ಸುಮಿತ್ ಸಿಂಗ್, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಅಪೇಕ್ಷಾ ಪೂರ್ಣಚಂದ್ರ, ಖಗೋಳ ವಿಜ್ಞಾನ ವಿಶೇಷ ತರಬೇತಿ ಪಡೆದ ವಿದ್ಯಾರ್ಥಿಗಳಾದ ಪ್ರಕೃತಿ, ಸುಮಾ ಅವರನ್ನು ಸನ್ಮಾನಿಸಲಾಯಿತು.
ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಆದರ್ಶ್, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್ ವಕೀಲರು, ಉದ್ಯಮಿ ಪೂರ್ಣಚಂದ್ರ ಜೈನ್, ಮಠದ ವ್ಯವಸ್ಥಾಪಕ ಸಂಜಯAತ್ ಕುಮಾರ್ ಉಪಸ್ಥಿತರಿದ್ದರು.
ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಸೌಮ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಸಿತಾರ್ ವಾದಕ ಡಾ.ಸುಮಿತ್ ಸಿಂಗ್ ಪದಂ ಸೀತಾರ್ ವಾದನ ನಡೆಯಿತು. ಮೂಡುಬಿದಿರೆಯ ವಿಘ್ನೇಶ್ ಕಾಮತ್ ತಬಲದಲ್ಲಿ ಸಹಕರಿಸಿದರು. ಸ್ಥಳೀಯ ವಿವಿಧ ಜೈನ ಮಹಿಳಾ, ಬಾಲಕ ಭಜನಾ ತಂಡಗಳಿAದ ಭಜನೆ ನೆರವೇರಿತು. ಸ್ವಸ್ತಿಶ್ರೀ ಜೈನ ವಸತಿ ಪ.ಪೂ ಕಾಲೇಜು ವಿದ್ಯಾರ್ಥಿನಿಯರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಬಳಿಕ ಭಗವಾನ್ ಚಂದ್ರ ಪ್ರಭ ಸ್ವಾಮಿ ಅಭಿಷೇಕ, ಲಕ್ಷ ದೀಪೋತ್ಸವ ಜರುಗಿತು.

RELATED ARTICLES
- Advertisment -
Google search engine

Most Popular