Sunday, July 21, 2024
Homeಮೂಡುಬಿದಿರೆಮೂಡುಬಿದಿರೆ: ಜೂ. 22ರಂದು ಪ್ರಾಚೀನ ತಾಡೋಲೆ, ಶಾಸನ-ತಾಮ್ರಪತ್ರ, ಕೈಫಿಯತ್-ಹಸ್ತಪ್ರತಿ ಸಂರಕ್ಷಣಾ ಕಾರ್ಯಗಾರ

ಮೂಡುಬಿದಿರೆ: ಜೂ. 22ರಂದು ಪ್ರಾಚೀನ ತಾಡೋಲೆ, ಶಾಸನ-ತಾಮ್ರಪತ್ರ, ಕೈಫಿಯತ್-ಹಸ್ತಪ್ರತಿ ಸಂರಕ್ಷಣಾ ಕಾರ್ಯಗಾರ

ಮೂಡುಬಿದಿರೆ: ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡುಬಿದಿರೆ ಮತ್ತು ಪ್ರಾಚ್ಯ ಸಂಶೋಧನೆ ಕೇಂದ್ರ – ಉಡುಪಿ (ರಿ) (ಅಂಗ ಸಂಸ್ಥೆ: NTC-AOM) ಸಹಯೋಗದಲ್ಲಿ ಜೂನ್ 22 ಶನಿವಾರ, ಒಂದು ದಿನದ ಪ್ರಾಚೀನ ತಾಡೋಲೆ, ಶಾಸನ-ತಾಮ್ರಪತ್ರ, ಕೈಫಿಯತ್-ಹಸ್ತಪ್ರತಿ ಸಂರಕ್ಷಣಾ ಕಾರ್ಯಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಗಾರವು “ಶ್ರೀ ರಮಾ ರಾಣಿ ಶೋಧ ಸಂಸ್ಥಾನ ಶ್ರೀ ಜೈನ ಮಠ ಮೂಡು ಧವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡುಬಿದಿರೆ”ಯಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 4:00 ವರೆಗೆ ನಡೆಯಲಿದೆ.

ಕಾರ್ಯಗಾರದ ಉದ್ಘಾಟನೆಯನ್ನು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿ ಶ್ರೀ ಜೈನ ಮಠ ಮೂಡುಬಿದಿರೆ ಅವರು ಶುಭಾಶೀರ್ವಾದಗಳೊಂದಿಗೆ ನೆರವೇರಿಸಲಿದ್ದಾರೆ.

ಸಂಪನ್ಮೂಲ ನಿರ್ವಹಣಕಾರರು:

 • ಪ್ರೊ. ಎಸ್.ಎ. ಕೃಷ್ಣಯ್ಯ, ಅಧ್ಯಯನ ನಿರತ ನಿರ್ದೇಶಕರು, ಮೈಸೂರು ವಿಶ್ವವಿದ್ಯಾನಿಲಯ ORI ಉನ್ನತ ಸಮಿತಿ ಸದಸ್ಯರು, ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಉಡುಪಿ (ಅಂಗ ಸಂಸ್ಥೆ: NTC-AOM)

ಗಣ್ಯ ಉಪಸ್ಥಿತಿ:

 • ಡಾ. ಉಮಾನಾಥ ಶೆಣೈ, ಇತಿಹಾಸಕಾರರು (ಶಾಸನ ಸಂರಕ್ಷಣೆ)
 • ಶ್ರೀ ಶೃತೇಶ ಆಚಾರ್ಯ, ಮೂಡುಬೆಳ್ಳೆ-ಶಿರ್ವ ಕಾಲೇಜು ಇತಿಹಾಸ ಉಪನ್ಯಾಸಕರು (ಬಂಗರ ಶಾಸನ ಮರು-ಓದುವಿಕೆ)
 • ಶ್ರೀ ರಾಘವೇಂದ್ರ ಅಮೀನ್, ನಿವೃತ್ತ ಚಿತ್ರಕಲಾ ಉಪನ್ಯಾಸಕರು-ಹಂಪಿ ವಿಶ್ವವಿದ್ಯಾಲಯ, ಜಂಗಮಮಠ (ನಿವೃತ್ತ ಲಲಿತ ಕಲಾ ಅಕಾಡೆಮಿ ಸದಸ್ಯರು)

ಸಮಾರೋಪ ವಿಶೇಷ ಉಪಸ್ಥಿತಿ:

 • ಡಾ. ಎಸ್.ಎನ್. ಅಮೃತಮಲ್ಲ, ಹಿರಿಯ ಪತ್ರಕರ್ತರು
 • ಶ್ರೀ ರಘುರಾಮ್, ಹಿರಿಯ ಪತ್ರಕರ್ತರು
 • ಸ್ಥಳೀಯ ಹಿತಚಿಂತಕರು

ವಿದ್ಯಾರ್ಥಿಗಳಿಗಾಗಿ:

 1. ಒಂದು ದಿನದ ತಾಡೋಲೆ ಸಂರಕ್ಷಣಾ ಕಾರ್ಯಗಾರ
 2. ಸ್ವಅಧ್ಯಯನ-ಪರಿಸರಾಸಕ್ತರಿಗೆ ‘ಕ್ಷಿತಿರೂಹ ನೋಂಪಿ ಸಂಕಲ್ಪ (ಗಿಡ ಮರಗಳನ್ನು ಬೆಳೆದು ದಾನ ನೀಡುವ ಆಶಯ) “ಹಸುರು ಹೊನ್ನ ಬಿತ್ತೋಣ ಜಗದಗಲ” ಪರಿಕಲ್ಪನೆ
 3. ದೂರದಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟ ವ್ಯವಸ್ಥೆ
 4. ಕಾರ್ಯಗಾರದಲ್ಲಿ ಪೂರ್ತಿ ದಿನ ಪಾಲ್ಗೊಳ್ಳುವ 16 ವರ್ಷ ಮೇಲ್ಪಟ್ಟ ಮತ್ತು 50 ವರ್ಷ ಒಳಗಿನ ಆಸಕ್ತಿ ಹೊಂದಿದ ಎಲ್ಲರಿಗೂ ಮುಕ್ತ ಅವಕಾಶ, ಪ್ರಮಾಣ ಪತ್ರ
 5. ವಿದ್ಯಾರ್ಥಿ ಹೆಸರು ನೋಂದಣಿ ಇಮೇಲ್ ಮೂಲಕ: jainkashi1@gmail.com ಅಥವಾ prachyasanchaya@gmail.com, ಸ್ಥಿರ ಕರೆ: 08258-236418

ವಿದ್ಯಾರ್ಥಿಗಳು ತಮ್ಮ ಕಾಲೇಜು ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಫೋಟೋ ಕಾಪಿ ಕಡ್ಡಾಯವಾಗಿ ಹಾಜರು ಪಡಿಸಬೇಕು.

RELATED ARTICLES
- Advertisment -
Google search engine

Most Popular