Saturday, July 20, 2024
Homeಅಪರಾಧಮೂಡುಬಿದ್ರೆ : ಅಧ್ಯಾಪಕನಿಂದ ಲೈಂಗಿಕ ಕಿರುಕುಳ - ದೂರು ದಾಖಲು

ಮೂಡುಬಿದ್ರೆ : ಅಧ್ಯಾಪಕನಿಂದ ಲೈಂಗಿಕ ಕಿರುಕುಳ – ದೂರು ದಾಖಲು

ಮೂಡುಬಿದ್ರೆ : ಕಲ್ಲಮುಂಡ್ಕೂರು ಸರ್ಕಾರಿ ಅನುದಾನಿತ ಶಾಲೆಯ ಅಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಘಟನೆ ತಡವಾಗಿ ಬೆಳಕಿಗೆ‌ ಬಂದಿದೆ.

ಆರೋಪಿಯನ್ನು ಶಾಲೆಯ ಸಹ ಅಧ್ಯಾಪಕ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಗುರುವ ಮೊಗೇರಾ ಎಂದು ಗುರುತಿಸಲಾಗಿದೆ. ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ಅಧ್ಯಾಪಕ ಗುರುವ ಮೊಗೇರಾ ಅವರು ಲೈಂಗಿಕ ಕಿರುಕುಳ ನೀಡಿರುವ ಕುರಿತು ಶಾಲೆಯ ಮುಖ್ಯೋಪಾಧ್ಯಾಯ ಸದಾನಂದ ಅವರು ಮೂಡುಬಿದ್ರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಫೆ.28ರಂದು ಹತ್ತನೇ ತರಗತಿಯ ಕೆಲವು ವಿದ್ಯಾರ್ಥಿನಿಯರು ಬಂದು ಸಹ ಶಿಕ್ಷಕ ಗುರುವ ಮೊಗೇರಾ ಅವರಿಂದ ತೊಂದರೆಗಳಾಗುತ್ತಿರುವ ಕುರಿತು ಹೇಳಿಕೊಂಡಿದ್ದರು. ಪಠ್ಯ ಸಂಬಂಧಿತ ವಿಷಯಕ್ಕೆ ಅಥವಾ ರಜಾ ಅರ್ಜಿ ಹಿಡಿದುಕೊಂಡು ಅವರ ಬಳಿಗೆ ಹೋದಾಗ, ಇಬ್ಬರು ವಿದ್ಯಾರ್ಥಿನಿಯರಿದ್ದರೆ ಒಬ್ಬರನ್ನು ಬೈದು ಹೊರಗೆ ಕಳುಹಿಸಿ ಒಬ್ಬಳನ್ನೇ ಕೊಠಡಿಯಲ್ಲಿ ಇರುವಂತೆ ಮಾಡಿ, ಅಸಭ್ಯವಾಗಿ ವರ್ತಿಸುವುದು, ಬ್ಯಾಡ್‌ ಟಚ್‌ ಮಾಡುವುದು ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಅಧ್ಯಾಪಕ ಗುರುವ ಮೊಗೇರಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಶಾಲೆಯ ಮುಖ್ಯ ಶಿಕ್ಷಕರು ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular