ಮೂಡುಪೆರಂಪಳ್ಳಿ: ತಾ. 27-03-2025ನೇ ಗುರುವಾರದಂದು ಶ್ರೀ ಎಡ್ಮೇರಿ ಬೊಬ್ಬರ್ಯ ದೈವಸ್ಥಾನದಲ್ಲಿ
ಕಾಲಾವಧಿ ಕೋಲ ಜರುಗಲಿರುವುದು. ಆ ಪ್ರಯುಕ್ತ ಮಧ್ಯಾಹ್ನ 12.30ಕ್ಕೆ ನಡೆಯುವ ಅನ್ನಸಂತರ್ಪಣೆ
ರಾತ್ರಿ ಗಂಟೆ 9.00ರಿಂದ ನಡೆಯುವ ಶ್ರೀ ದೈವದ ಕೋಲವು ಸಂಪ್ರದಾಯದಂತೆ ಯಥಾಯೋಗ್ಯವಾಗಿ ನಡೆಯಲಿರುವುದು.
ತಾ: 27-03-2025ನೇ ಗುರುವಾರ ಕಾರ್ಯಕ್ರಮಗಳು ಬೆಳಿಗ್ಗೆ 8.30ಕ್ಕೆ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶತರುದ್ರಾಭಿಷೇಕ. ಬೆಳಿಗ್ಗೆ 9.30ಕ್ಕೆ ನವಕ ಪ್ರಧಾನ ಹೋಮ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ.ಸಂಜೆ 6.00 ಗಂಟೆಗೆ ಭಂಡಾರದ ಮನೆಯಿಂದ ದೈವಸ್ಥಾನದ ಭಂಡಾರವನ್ನು ಮೆರವಣಿಗೆಯಿಂದ ತರುವುದು. 7.00ಗಂಟೆಗೆ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಿಂದ ತೀರ್ಥಪ್ರಸಾದ ತರುವುದು. ರಾತ್ರಿ 9.00ರಿಂದ ಶ್ರೀ ದೈವದ ಕೋಲ.ಶ್ರೀ ದೈವದ ಕೋಲ ತಾ.29-03-2025 ಶನಿವಾರ ಗೋಂದಲು ಸೇವೆ.ತಾ.30-03-2025 ಭಾನುವಾರ-ಮಾರಿ ನಡೆಯಲಿದೆ.