ಕಿನ್ನಿಗೋಳಿ: ಶರತ್ ಶೆಟ್ಟಿ ಸಾರಥ್ಯದ ವಿಜಯ ಕಲಾವಿದರು ಕಿನ್ನಿಗೋಳಿ ಸಂಸ್ಥೆಯ ರಾಜೇಶ್ ಕೆಂಚನಕೆರೆ ರಚನೆಯ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ನೂತನ ನಾಟಕ ಪರಿಮಳ ಕ್ಯಾಟರಿಂಗ್ ನ ಮೂಹೂರ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು. ನಂತರ ಮಾತನಾಡಿ ನಟ ನಾಟಕ ರಚನೆಗಾರ ರಾಜೇಶ್ ಕೆಂಚನಕೆರೆ ಮಾತನಾಡಿ ನನ್ನ ರಚನೆಯ 6 ನೇ ನಾಟಕ ಇದಾಗಿದ್ದು ಕ್ಯಾಟರಿಂಗ್ ವ್ಯವಸ್ಥೆಯಲ್ಲಿನ ಆಗು ಹೋಗುಗಳನ್ನು ಹಾಸ್ಯಾಸ್ಪದವಾಗಿ ರಚನೆ ಮಾಡಲಾಗಿದ್ದು, ವಿನೂತನವಾಗಿ ಮೂಡಿ ಬರಲಿದೆ, ಎಂದರು ಕಟೀಲು ದೇಗುಲದ ಪ್ರಧಾನಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಸ್ಕ್ರಿಪ್ಟ್ ಗೆ ಪೂಜೆ ಸಲ್ಲಿಸುವ ಮೂಲಕ ಮೂಹೂರ್ತ ನೆರವೇರಿಸಿದರು. ಈ ಸಂದರ್ಭ ಸದಾನಂದ ಆಸ್ರಣ್ಣ, ಭೂಜರಾಜ್ ವಾಮಂಜೂರು, ಸಾಯಿನಾಥ ಶೆಟ್ಟಿ ಮುಂಡ್ಕೂರು ಭುವನಾಭಿರಾಮ ಉಡುಪ, ಸ್ವರಾಜ್ ಶೆಟ್ಟಿ ಮುಂಡ್ಕೂರು, ಶರತ್ ಶೆಟ್ಟಿ ಕಿನ್ನಿಗೋಳಿ, ಪ್ರಕಾಶ್ ಆಚಾರ್ಯ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು, ಗಿರೀಶ್ ಶೆಟ್ಟಿ ಕಟೀಲು, ಬಾಸ್ಕರ ಪಕ್ಷಿಕೆರೆ, ಸುರೇಶ್ ಐಕಳ, ದಿನೇಶ್ ಪಾಪು, ಸುಧಾಕರ ಸಾಲಿಯಾನ್, ಲಕ್ಷಣ್ ಬಿ.ಬಿ.ಏಳಿಂಜೆ ಉದಯ ಲೈಟ್ ಹೌಸ್ ಮತ್ತಿತರರು ಉಪಸ್ಥಿತರಿದ್ದರು.