ಮಂಗಳೂರು: ತುಳು ಭಾಷೆಯನ್ನು 8ನರ ಪರಿಚ್ಚೇದಕ್ಕೆ ಸೇರಿಸಬೇಕು, ತುಳುವಿಗೆ ಅಧಿಕೃತ ಮಾನ್ಯತೆ ದೊರಕಬೇಕು ಎಂಬ ಉದ್ದೇಶದಿಂದ ತುಳುನಾಡಿನ ಎಲ್ಲಾ ಸಂಘಟನೆಗಳ ಒಗ್ಗೂಡಿಕೆಯಲ್ಲಿ ತುಳು ಟ್ವೀಟ್‌ ಅಭಿಯಾನವನ್ನು ಮಾಡಲಾಗಿತ್ತು. ತುಳುನಾಡಿನ ವಿವಿಧ ತುಳುವರ ಸಂಘಟನೆಗಳು ಕಳೆದ 3 ದಿನಗಳಿಂದ ತುಳುವಿಗೆ ಹೆಚ್ಚುವರಿ ರಾಜ್ಯಭಾಷೆ ಹಾಗೂ ಸಂವಿಧಾನದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ 75 ಸಾವಿರಕ್ಕೂ ಅಧಿಕ ಟ್ವಿಟ್ ಮಾಡುವ ಮೂಲಕ ಸದ್ದು ಮಾಡಿದ್ದಾರೆ. ಆ.30, 31 ಮತ್ತು ಸೆ.1ರಂದು ಟ್ವಿಟ್ ತುಳುನಾಡ್ ಅಭಿಯಾನ ಹಮ್ಮಿಕೊಂಡಿತ್ತು.

ತುಳುನಾಡ್ ಒಕ್ಕೂಟ, ತುಳುವೆರ್ ಕುಡ ಯುವ ತುಳುನಾಡ್, ತುಳು ಪೀಡಿಯ, ತುಳುನಾಡು ನಿರ್ಮಾಣ ಸೇನೆ, ತುಳುವಾಸ್‌ ಕೌನ್ಸಿಲ್‌ ಅಭಿಯಾನದ ನೇತೃತ್ವ ವಹಿಸಿತ್ತು. ಸೆ.1ರಂದು 30 ಸಾವಿರದಷ್ಟು ಟ್ವಿಟ್ ನಡೆದರೆ ಉಳಿದ 2 ಮತ್ತಷ್ಟು ಟ್ವೀಟ್‌ ಗಳು ದಿನಗಳಲ್ಲಿ ನಡೆದಿದೆ. ಸೆ.1ರಂದು ಟ್ವಿಟ್ಟರ್ ನಲ್ಲಿ ಕರ್ನಾಟಕದಲ್ಲಿ ಟ್ವೀಟ್‌ ಬ್ರೆಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ದೇಶದಲ್ಲಿ 42ನೇ ಸ್ಥಾನದಲ್ಲಿತ್ತು ಎಂದು ಟ್ವಿಟ್ ತುಳುನಾಡ್‌ ಅಭಿಯಾನದ ರೂವಾರಿಗಳು ಮಾಹಿತಿ ನೀಡಿದ್ದಾರೆ.