Tuesday, April 22, 2025
Homeರಾಷ್ಟ್ರೀಯಮಹಾಕುಂಭಪರ್ವದಲ್ಲಿನ ಸನಾತನದ ಗ್ರಂಥ ಪ್ರದರ್ಶನಿಗೆ 75,000 ಗಿಂತಲೂ ಅಧಿಕ ಭಕ್ತರ ಭೇಟಿ !

ಮಹಾಕುಂಭಪರ್ವದಲ್ಲಿನ ಸನಾತನದ ಗ್ರಂಥ ಪ್ರದರ್ಶನಿಗೆ 75,000 ಗಿಂತಲೂ ಅಧಿಕ ಭಕ್ತರ ಭೇಟಿ !

ಅಮೇರಿಕಾ, ರಷ್ಯಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ ದೇಶಗಳಿಂದ ಬಂದ ಭಕ್ತರೂ ಪ್ರದರ್ಶಿನಿಯ ಕಡೆ ಆಕರ್ಷಿತ  

ಮಹಾಕುಂಭ ಕ್ಷೇತ್ರದ ಸೆಕ್ಟರ್ 19 ರ ಮೋರಿ ಮುಕ್ತಿ ಮಾರ್ಗ ವೃತ್ತದಲ್ಲಿ ಹಾಕಲಾಗಿರುವ ಸನಾತನದ ಗ್ರಂಥ ಮತ್ತು ಫಲಕ ಪ್ರದರ್ಶನಿಗೆ ಸಾಧು ಸಂತರು, ಭಕ್ತರು, ಹಾಗೂ ಗಣ್ಯರಿಂದ ಉತ್ಸಾಹಪೂರ್ಣ ಪ್ರತಿಕ್ರಿಯೆ ಲಭಿಸಿತು. ಜನವರಿ 10 ರಿಂದ ಫೆಬ್ರವರಿ 12 ಈ ಕಾಲಾವಧಿಯಲ್ಲಿ ಹಾಕಲಾಗಿದ್ದ ಗ್ರಂಥ ಪ್ರದರ್ಶನಿಗೆ ಒಟ್ಟು 75,000 ಗಿಂತಲೂ ಹೆಚ್ಚಿನ ಭಕ್ತರು ಭೇಟಿ ನೀಡಿದ್ದಾರೆ. ಇದರಲ್ಲಿ ಭಾರತದಲ್ಲಿನ ಅನೇಕ ರಾಜ್ಯಗಳ ಸಹಿತ ಅಮೇರಿಕಾ, ರಷ್ಯಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೇಪಾಳ ಮುಂತಾದ ದೇಶದಲ್ಲಿನ ಭಕ್ತರ ಸಮಾವೇಶ ಇದೆ.

ಈ ಪ್ರದರ್ಶನಿಯಲ್ಲಿ ಆಧ್ಯಾತ್ಮ, ಆಯುರ್ವೇದ, ಬಾಲಸಂಸ್ಕಾರ, ಧರ್ಮಶಾಸ್ತ್ರ, ಆಪತ್ಕಾಲ ಮುಂತಾದ ವಿಷಯಗಳ ಗ್ರಂಥಗಳು ಬಂಗಾಳಿ, ಇಂಗ್ಲೀಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಓಡಿಯ, ತಮಿಳು ಮತ್ತು ತೆಲುಗು ಈ ಭಾಷೆಗಳಲ್ಲಿ ಲಭ್ಯವಿದ್ದವು. ಈ ಎಲ್ಲಾ ಗ್ರಂಥಗಳಲ್ಲಿ ಮುಖ್ಯವಾಗಿ ಆಚಾರಧರ್ಮದ ಆಧಾರಿತ ಗ್ರಂಥಗಳ ಕಡೆ ಭಕ್ತರ ಒಲವು ಎಲ್ಲಕ್ಕಿಂತ ಹೆಚ್ಚು ಇರುವುದಾಗಿ ಕಂಡುಬಂದಿತು.

ವಿಶೇಷ ಎಂದರೆ ಸನಾತನದ ಎಲ್ಲಾ ಭಾಷೆಗಳಲ್ಲಿನ ಗ್ರಂಥಗಳಲ್ಲಿ ಬಂಗಾಳಿ ಭಾಷೆಯಲ್ಲಿನ ಗ್ರಂಥಗಳಿಗೆ ಎಲ್ಲಕ್ಕಿಂತ ಹೆಚ್ಚು ಬೇಡಿಕೆ ಇದೆ. ಈ ಪ್ರದರ್ಶನ ಸ್ಥಳದಲ್ಲಿ ಹಾಕಲಾಗಿರುವ ಪ್ರತಿಯೊಂದು ಫಲಕ ಪ್ರದರ್ಶನಿಗೆ ಕೂಡ ಭಕ್ತರಿಂದ ಉತ್ಸಾಹಮಯ ಪ್ರತಿಕ್ರಿಯೆ ಲಭಿಸಿದೆ. ಅನೇಕರು ಸ್ವತಃ ಮೊಬೈಲ್ನಲ್ಲಿ ಈ ಎಲ್ಲಾ ಫಲಕಗಳ ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ಇದರೊಂದಿಗೆ ಸನಾತನದ ವತಿಯಿಂದ ಈ-ರಿಕ್ಷಾ ಮತ್ತು ಮೊಬೈಲ್ ಗ್ರಂಥ ಪ್ರದರ್ಶನಿ, ಎಂದರೆ ‘ಮೊಬೈಲ್ ಸ್ಟಾಲ್’ನಂತಹ ಮಾಧ್ಯಮಗಳಿಂದಲೂ 11000 ಕ್ಕಿಂತ ಹೆಚ್ಚಿನ ಜಿಜ್ಞಾಸುಗಳು ಸನಾತನದ ಗ್ರಂಥಗಳ ಲಾಭ ಪಡೆದರು. ಅನೇಕ ಜಿಜ್ಞಾಸುಗಳು ಅವರ ರಾಜ್ಯಗಳಲ್ಲಿ ಸನಾತನದ ಗ್ರಂಥ ವಿತರಣೆಗಾಗಿ ಸ್ಥಳ ಉಪಲಬ್ಧ ಮಾಡಿ ಕೊಡುವುದಾಗಿ ಸನಾತನದ ಕಾರ್ಯದಲ್ಲಿ ಸಹಭಾಗಿ ಆಗುವ ಆಶ್ವಾಸನೆ ನೀಡಿದರು.

RELATED ARTICLES
- Advertisment -
Google search engine

Most Popular