Thursday, April 24, 2025
Homeಬಂಟ್ವಾಳಹಿಂದೂ ರಾಷ್ಟ್ರದ ಸಂಕಲ್ಪ ಮಾಡಿದ 800 ಕ್ಕೂ ಅಧಿಕ ಹಿಂದುತ್ವನಿಷ್ಟರು!

ಹಿಂದೂ ರಾಷ್ಟ್ರದ ಸಂಕಲ್ಪ ಮಾಡಿದ 800 ಕ್ಕೂ ಅಧಿಕ ಹಿಂದುತ್ವನಿಷ್ಟರು!

ಬಂಟ್ವಾಳ: ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ 16 ಮಾರ್ಚ್ 2025, ಭಾನುವಾರದಂದು ಸ್ಪರ್ಶಾ ಕಲಾ ಮಂದಿರ, ಬಿ. ಸಿ. ರೋಡ್, ಬಂಟ್ವಾಳದಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನವು ನಿರ್ವಿಘ್ನವಾಗಿ ನೆರವೇರಿತು. ಈ ಅಧಿವೇಶನದಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯ ಹಿಂದುತ್ವನಿಷ್ಟರು, ವೈದ್ಯರು, ವಕೀಲರು, ಉದ್ಯಮಿಗಳು, ಹಿಂದೂ ಸಂಘಟನೆಗಳ ಮುಖಂಡರು ಮತ್ತು 800 ಕ್ಕೂ ಅಧಿಕ ಜಾಗೃತ ಹಿಂದೂಗಳು ಉಪಸ್ಥಿತರಿದ್ದರು. ಬಂಟ್ವಾಳದ ಹಿಂದೂ ಯುವ ಸೇನೆಯ ಅಧ್ಯಕ್ಷರಾದ ಶ್ರೀ. ಕಿರಣ್ ರೈ, ಪ್ರಖ್ಯಾತ ಉದ್ಯಮಿಗಳಾದ ಶ್ರೀ. ಶಶಾಂಕ ಕೊಟೇಚಾ, ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಗಣೇಶ್ ಶೆಟ್ಟಿ, ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾದ ಶ್ರೀ. ಅನಿಲ್ ಕುಮಾರ ರೈ ಮುಂತಾದ ಹಿಂದೂ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಹಿಂದೂ ರಾಷ್ಟ್ರದ ಘೋಷಣೆಯೊಂದಿಗೆ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ನಿರ್ವಿಘ್ನವಾಗಿ ಸಂಪನ್ನಗೊಂಡಿತು.

ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದ ಪ್ರಸ್ತಾವನೆಗಳು!

೧. ಕರ್ನಾಟಕ ಸರಕಾರವು ಮುಸಲ್ಮಾನರಿಗೆ ತನ್ನ ಬಜೆಟ್ ನಲ್ಲಿ ೪೫೦೦ ಕೋಟಿ ರೂಪಾಯಿಗಳ ಅನುದಾನ ನೀಡಿರುವುದನ್ನು ಈ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುವುದು ಮತ್ತು ರಾಜ್ಯವ್ಯಾಪಿ ಆಂದೋಲನ ಮಾಡಲಾಗುವುದು.

೨. ಕೇಂದ್ರ ಸರಕಾರವು ಭಾರತದ ಬಹುಸಂಖ್ಯಾತ ಹಿಂದೂಗಳಿಗೆ ನ್ಯಾಯ ಒದಗಿಸಲು ಸಂವಿಧಾನದಿಂದ `ಸೆಕ್ಯುಲರ್’ ಮತ್ತು `ಸೋಷಿಯಲಿಸ್ಟ್’ ಪದಗಳನ್ನು ತೆಗೆದು `ಸ್ಪಿರಿಚುಯಲ್’ ಪದವನ್ನು ಸೇರಿಸಿ ಭಾರತವನ್ನು `ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು.

೩.  ಸಂವಿಧಾನದ ೪೪ ನೇ ಕಲಂ ಪ್ರಕಾರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕು.

೪. ಕೇಂದ್ರ ಸರಕಾರವು ಹಿಂದೂಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ `ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ೧೯೯೧’ ಕಾನೂನನ್ನು ತಕ್ಷಣ ರದ್ದುಗೊಳಿಸಬೇಕು. ಕಾಶಿ, ಮಥುರಾ, ತಾಜ್ ಮಹಲ್, ಭೋಜಶಾಲಾ ಮುಂತಾದ ಮೊಘಲ್ ಆಕ್ರಮಣಕಾರರಿಂದ ಆಕ್ರಮಿಸಲ್ಪಟ್ಟ ದೇವಾಲಯಗಳು ಮತ್ತು ಭೂಮಿಯನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು.

೫. ದೇಶಾದ್ಯಂತ ಸರ್ಕಾರದ ನಿಯಂತ್ರಣದಲ್ಲಿರುವ ಎಲ್ಲಾ ದೇವಾಲಯಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು. ದೇವಾಲಯದ ಆವರಣವನ್ನು ಮದ್ಯ-ಮಾಂಸ ಮುಕ್ತಗೊಳಿಸಬೇಕು.

೬. `ಸಮಾನಾಂತರ ಆರ್ಥಿಕತೆ’ಯನ್ನು ನಿರ್ಮಿಸುವ `ಹಲಾಲ್ ಸರ್ಟಿಫಿಕೇಶನ್’ ಅನ್ನು ತಕ್ಷಣವೇ ನಿಷೇಧಿಸಬೇಕು.

೭. ಭಾರತಕ್ಕೆ ನುಸುಳಿರುವ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿ ಮುಸ್ಲಿಮರನ್ನು ವಾಪಸ್ ಕಳುಹಿಸಲು ಸರ್ಕಾರವು ಕಠಿಣ ಕಾನೂನುಗಳನ್ನು ರೂಪಿಸಬೇಕು. ರಾಜ್ಯದಲ್ಲಿ  ಸಿ.ಎ.ಎ. ಕಾನೂನನ್ನು ತಕ್ಷಣವೇ ಜಾರಿಗೆ ತರಬೇಕು.

೮.  ದೇಶದಲ್ಲಿ ತಕ್ಷಣವೇ `ಜನಸಂಖ್ಯಾ ನಿಯಂತ್ರಣ ಕಾನೂನು’ ಜಾರಿಯಾಗಬೇಕು.

೯. ಭಾರತದ ವಿರುದ್ಧ ಯುದ್ಧ ಮಾಡಲು `ಗಜ್ವಾ-ಎ-ಹಿಂದ್’ ಫತ್ವಾ ಹೊರಡಿಸಿದ `ದಾರುಲ್ ಉಲೂಮ್ ದೇವಬಂದ್’ ಸಂಸ್ಥೆಯನ್ನು ತಕ್ಷಣವೇ ನಿಷೇಧಿಸಬೇಕು.

೧೦. ಒಟಿಟಿ ಮತ್ತು ವೆಬ್ ಸರಣಿಗಳನ್ನು ಕಾನೂನಿನ ವ್ಯಾಪ್ತಿಗೆ ತರಬೇಕು. ಸೆನ್ಸಾರ್ ಮಂಡಳಿಯಲ್ಲಿ ಹಿಂದುತ್ವವಾದಿ ಮತ್ತು ಆಧ್ಯಾತ್ಮಿಕ ಸಂಸ್ಥೆಗಳ ಪ್ರತಿನಿಧಿಗಳನ್ನು ಸೇರಿಸಬೇಕು. ಇದರೊಂದಿಗೆ `ಆನ್‌ಲೈನ್ ರಮ್ಮಿ’ಯಂತಹ ಪ್ರಕಾರಗಳನ್ನು ನಿಷೇಧಿಸಬೇಕು.

RELATED ARTICLES
- Advertisment -
Google search engine

Most Popular