ಬೆಳ್ತಂಗಡಿ: 10ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಸ್ಪರ್ಧೆಗಳು ಸೆ. 1ರಂದು ಸುಲ್ಕೇರಿಮೊಗ್ರುವಿನಲ್ಲಿ ನಡೆಯಲಿದ್ದು, ವಿಶೇಷ ಆಕರ್ಷಣೆಯಾಗಿ ಪ್ರಪ್ರಥಮ ಬಾರಿಗೆ ಸುಲ್ಕೇರಿಮೊಗ್ರುಗೆ ಸ್ಪೆಶಲ್ ಗೆಸ್ಟ್ ಕಂಬಳ ಕೋಣ ಕಿಂಗ್ ತಾಟೆ ಆಗಮಿಸಲಿದ್ದಾನೆ. ಸುಲ್ಕೇರಿಮೊಗ್ರು ನಡಿಬೆಟ್ಟು ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ 12.30ಕ್ಕೆ ಕಂಬಳ ಕ್ಷೇತ್ರದಲ್ಲಿ ಸಾಧನೆಗೈದ ದಿ. ಬಾಡ ಪೂಜಾರಿ ಇರುವೈಲು ಪಾಣಿಲ ಇವರ ಕಿಂಗ್ ತಾಟೆ ಕೋಣಕ್ಕೆ ಸನ್ಮಾನ ನಡೆಯಲಿದೆ. ಕಾರ್ಯಕ್ರಮದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಮುಕ್ತ ಶ್ರೀ ಕೃಷ್ಣ ವೇಷ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನ 3000 ರೂ. ಮತ್ತು ದ್ವಿತೀಯ ಬಹುಮಾನ 2000 ರೂ. ಇರಲಿದೆ ಎಂದು ಸಂಘಟಕರು ಹೇಳಿದ್ದಾರೆ. ಮುಕ್ತ ಜಾರು ಕಂಬ ಹತ್ತುವ ಸ್ಪರ್ಧೆಕೂಡ ನಡೆಯಲಿದೆ. ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳನ್ನು ಗೌರವಿಸಲಾಗುವುದು. ಮುಕ್ತ ಜಾರು ಕಂಬ ಹತ್ತುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 3333 ರೂ. ಬಹುಮಾನವಿರುತ್ತದೆ.