ಚೆನ್ನೈ: ಅಪಾರ್ಟ್ ಮೆಂಟ್ ವೊಂದರ ನಾಲ್ಕನೇ ಮಹಡಿಯಿಂದ ಸನ್ ಶೆಡ್ ಮೇಲೆ ಬಿದ್ದು, ರಕ್ಷಿಸಲ್ಪಟ್ಟಿದ್ದ ವಿಡಿಯೋ ಕೆಲವು ದಿನಗಳ ಹಿಂದೆ ವೈರಲ್ ಆಗಿ ಸುದ್ದಿಯಾಗಿತ್ತು. ಇದೀಗ ಈ ಮಗುವಿನ ತಾಯಿ ಆಹ್ಮತತ್ಯೆ ಮಾಡಿಕೊಂಡಿದ್ದಾರೆ.
ಆಕಸ್ಮಿಕವಾಗಿ ಮಗು ತನ್ನ ಕೈಯಿಂದ ಜಾರಿ ನಾಲ್ಕನೇ ಮಹಡಿಯಿಂದ ಬಿದ್ದಿತ್ತು. ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಕ್ಕಪಕ್ಕದವರ ನಿಂದನೆಗೆ ಮನನೊಂದು ರಮ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಯಮತ್ತೂರಿನ ಕಾರಮಡೈಯಲ್ಲಿರುವ ತವರು ಮನೆಯಲ್ಲಿ ಭಾನುವಾರ ರಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಮ್ಯಾ ಹಾಗೂ ಅವರ ಪತಿ ವೆಂಕಟೇಶ್ ಇಬ್ಬರೂ ಟೆಕ್ಕಿಗಳು. ಎರಡು ವಾರಗಳ ಹಿಂದೆ ಪತಿ, ಮಗುವಿನೊಂದಿಗೆ ತವರಿಗೆ ತೆರಳಿದ್ದ ರಮ್ಯಾ ಭಾನುವಾರ ಮನೆಯವರೆಲ್ಲಾ ಮದುವೆಗೆ ತೆರಳಿದ್ದ ಸಂದರ್ಭ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಬಳಿಕ ರಮ್ಯಾ ಖಿನ್ನತೆಗೆ ಗುರಿಯಾಗಿದ್ದರೆನ್ನಲಾಗಿದೆ. ಮಗು ಬೀಳಲು ರಮ್ಯಾರೇ ಕಾರಣ ಎಂಬಂತೆ ಅಂದು ಅಪಾರ್ಟ್ ಮೆಂಟ್ ನಿವಾಸಿಗಳೂ ಕೆಲವು ಟಿವಿ ವಾಹಿನಿಗಳಿಗೆ ಹೇಳಿಕೆ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ನಿಂದನೆ ವ್ಯಕ್ತವಾಗಿತ್ತು.