ಮಧ್ಯಪ್ರದೇಶ: ಅಪ್ಪ-ಅಮ್ಮನ ಜತೆ ಸೇರಿ ವ್ಯಕ್ತಿಯೊಬ್ಬ ಪತ್ನಿಯ ಗುಪ್ತಾಂಗಕ್ಕೆ ಮೆಣಸಿನ ಪುಡಿ, ರಾಡ್ ಹಾಕಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ರಾಜ್ಗಢದಲ್ಲಿರುವ ತಮ್ಮ ಮನೆಯಲ್ಲಿ ಆಕೆಯನ್ನು ಇನ್ನೊಬ್ಬರ ಜತೆ ನೋಡಿದ್ದಾಗಿ ಹೇಳಿರುವ ಅತ್ತೆ ಮಾವ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ಅತ್ತೆ-ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ, ಅತ್ತಿಗೆ, ಅತ್ತೆ ಮತ್ತು ಮಾವ ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ಸಂತ್ರಸ್ತೆಯ ಖಾಸಗಿ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಬರೆ ಹಾಕಿ, ಗುಪ್ತಾಂಗಕ್ಕೆ ಮೆಣಸಿನ ಪುಡಿಯನ್ನು ಹಾಕಿದ್ದಾರೆ. ಡಿ. 13ರಂದು ಈ ಘಟನೆ ನಡೆದಿದ್ದು, ಪತಿ ಮತ್ತು ಮಾವ ಸಂತ್ರಸ್ತೆಯನ್ನು ಬೈಕ್‌ನಲ್ಲಿ ಕರೆದೊಯ್ದು ಪೊಲೀಸ್ ಠಾಣೆ ಬಳಿ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ಪ್ರಕಾರ, ರೋಹಿತ್ ರುಹೇಲಾ ಎಂಬ ವ್ಯಕ್ತಿ ಮಹಿಳೆಯ ಮನೆಗೆ ಬಂದು ಸ್ಟೀಮ್ ಯಂತ್ರವನ್ನು ಕೇಳಿದ್ದಾನೆ. ಸಂತ್ರಸ್ತೆ ಗೇಟ್ ಬಳಿ ಕಾಯಲು ಹೇಳಿದಾಗ, ಅವನು ಬಾಗಿಲು ಮುಚ್ಚಿ, ಅವಳ ಕೋಣೆಗೆ ಪ್ರವೇಶಿಸಿ ಕಿರುಕುಳ ನೀಡಲು ಪ್ರಯತ್ನಿಸಿದ್ದ.
ಈ ವೇಳೆ ಆಕೆಯ ಅತ್ತಿಗೆ ಕೊಠಡಿ ಪ್ರವೇಶಿಸಿದ್ದು, ಆರೋಪಿ ಪರಾರಿಯಾಗಿದ್ದಾನೆ. ಆದರೆ ಅವರು ನನ್ನನ್ನು ದೂಷಿಸಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಅತ್ತೆ-ಮಾವನಿಂದ ಸೊಸೆಯ ಗುಪ್ತಾಂಗಕ್ಕೆ ಮೆಣಸಿನಪುಡಿ, ರಾಡ್ ಹಾಕಿ ಚಿತ್ರಹಿಂಸೆ
RELATED ARTICLES