ಬೆಂಗಳೂರಿನ ಉದ್ಯಮಿ ವಿಜಯಕುಮಾರ್ ನಿರ್ಮಾಣದ ಹಿರಣ್ಮಯಿ ಹೆಚ್, ವಿ, ಎಸ್, ಎಂಟರ್ಪ್ರೈಸಸ್ ಬ್ಯಾನರ್ ನಡಿ ,ಸಿನಿಮಾ ನಟ ಆನಂದ್ ಎರ್ಮಾಳ್ ನಿರ್ದೇಶನದ,ಉಪನ್ಯಾಸಕರೂ, ಸಾಹಿತಿ,ಸಂಶೋಧಕರೂ ಆದ ಬಿ,ಎ, ಲೋಕಯ್ಯ ಶಿಶಿಲರ ಕತೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಯ ಸಾರ್ಲ ಪಟ್ಟದ ಮಾಯೆ ಸ್ವಾಮೀ ಶ್ರೀ ಕೊರಗಜ್ಜ ಸಿನಿಮಾ ತಂಡದ ಜೊತೆಗೆ ತುಳುನಾಡಿನ ಉದಯೋನ್ಮುಖ ಕಲಾ ಪ್ರತಿಭೆ ಶ್ರೀ ಅಲೋಕ್ ದುರ್ಗಾಪ್ರಸಾದ್ ರ ಕೃತಾರ್ಥಾಪ್ರೊಡಕ್ಷನ್ ಲಾಂಛನದಡಿ ನಿರ್ಮಾಣಗೊಂಡು ಅವರಿಂದಲೇ ನಿರ್ದೇಶಿಸಲ್ಪಟ್ಟು ಮತ್ತು ಅವರೇ ನಾಯಕ ನಟನಾಗಿಯೂ ನಟಿಸಿ ಸದ್ಯದಲ್ಲೇ ಬಿಡುಗಡೆಯಾಗಲಿರುವ ಕುಡ್ಲ ನಮ್ದೂರು ಕನ್ನಡ ಸಿನಿಮಾ ತಂಡವು ಕಳೆದ ಶನಿವಾರ ಶ್ರೀ ಕ್ಷೇತ್ರ ಕುತ್ತಾರು ಶ್ರೀ ಕೊರಗಜ್ಜ ದೈವ ಸನ್ನಿಧಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿತು.
ಶ್ರೀ ಕೊರಗಜ್ಜ ಸ್ವಾಮಿಯ ಕುರಿತಾಗಿ ಈವರೆಗೆ ಯಾರೂ ಕಂಡು ಕೇಳರಿಯಾದ ಅತಿ ವಿಶಿಷ್ಟವಾದ ನೈಜ ಕಥಾ ಹಂದರವಿದ್ದು ಸೇವಾ ರೂಪದಲ್ಲಿ ನಿರ್ಮಿಸಲಾಗುವ ಸಾರ್ಲ ಪಟ್ಟದ ಮಾಯೆ ಸ್ವಾಮೀ ಶ್ರೀ ಕೊರಗಜ್ಜ ಸಿನಿಮಾವು ತುಳು ಹಾಗೂ ಕನ್ನಡ ಭಾಷೆಯಲ್ಲಿ ಮೂಡಿಬರಲಿದೆ.
ಈಗಾಗಲೇ ಕೃತರ್ಥ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಕುಡ್ಲ ನಮ್ದೂರು ಎಂಬ ವಿಭಿನ್ನ ಶೈಲಿಯ ಕನ್ನಡ ಸಿನಿಮಾವನ್ನು ತಾನೇ ನಿರ್ಮಿಸಿ,ನಿರ್ದೇಶಿಸಿ ನಾಯಕ ನಟನಾಗಿಯೂ ಅಭಿನಯಿಸಿರುವ ಮಂಗಳೂರಿನ ಯುವಕಲಾ ಪ್ರತಿಭೆ ಶ್ರೀ ಅಲೋಕ್ ದುರ್ಗಾ ಪ್ರಸಾದ್, ಸಾರ್ಲ ಪಟ್ಟದ ಮಾಯೆ ಸ್ವಾಮಿ ಶ್ರೀ ಕೊರಗಜ್ಜ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಅದೇ ರೀತಿ ಇಡೀ ಸಿನಿಮಾರಂಗದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಪ್ರಾಚೀನ ಕಾಲದಿಂದಲೂ ಸಮಾಜದಿಂದ ದೂರ ತಳ್ಳಲ್ಪಟ್ಟು, ಅದೇ ರೀತಿ ಈಗಲೂ ಸಮಾಜದ ಮುಖ್ಯ ವಾಹಿನಿಯಿಂದ ಕಡೆಗಣಿಸಲ್ಪಟ್ಟಿರುವ ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಸಮುದಾಯ ಮತ್ತು ಕೊರಗಜ್ಜನ ವಂಶಸ್ಥರು ಈ ಸಿನಿಮಾದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವುದು ಈ ಸಿನಿಮಾದ ಮತ್ತೊಂದು ವೈಶಿಷ್ಟ್ಯವಾಗಿದೆ.
ಶ್ರೀ ಕ್ಷೇತ್ರ ಕುತ್ತಾರು ಶ್ರೀ ಕೊರಗಜ್ಜ ದೈವ ಸನ್ನಿಧಿಗೆ ಭೇಟಿ ನೀಡಿದ ಈ ಎರಡು ಸಿನಿಮಾ ತಂಡಗಳ ಜೊತೆ ಸಿನಿಮಾ ನಟ ಹಾಗೂ ನಿರ್ದೇಶಕರಾದ ಆನಂದ್ ಎರ್ಮಾಳ್, ಕಥೆ, ಚಿತ್ರಕಥೆ,ಸಾಹಿತ್ಯ ಸಂಭಾಷಣೆ ಬರೆದು ಸಹ ನಿರ್ದೇಶನ ಮಾಡಲಿರುವ ಉಪನ್ಯಾಸಕರೂ, ಸಾಹಿತಿಗಳೂ, ಸಂಶೋಧಕರೂ ಆದ ಬಿ, ಎ, ಲೋಕಯ್ಯ ಶಿಶಿಲ ಮತ್ತು ಕುಡ್ಲ ನಮ್ದೂರು ಸಿನಿಮಾದ ನಾಯಕ ನಟ,ನಿರ್ಮಾಪಕ, ನಿರ್ದೇಶಕ ಅಲೋಕ್ ದುರ್ಗಾ ಪ್ರಸಾದ್ ಹಾಗೂ ಬೆಂಗಳೂರಿನ ಇತರ ಸಹ ನಟರು, ಛಾಯಾಗ್ರಹಕರು, ತಂತ್ರಜ್ಞರು ಮುಂತಾದವರಿದ್ದರು.