ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಕೊಡಂಗೆ ಎಂಬಲ್ಲಿ ನ.೨೩ರಂದು ನಡೆಯಲಿರುವ ‘ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶಿವಮೊಗ್ಗ ಸಂಸದ ವೈ.ರಾಘವೇಂದ್ರ ಯಡಿಯೂರಪ್ಪ ಇವರನ್ನು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಇವರು ಸೋಮವಾರ ಆಹ್ವಾನಿಸಿದರು. ಶಿವಮೊಗ್ಗ ಕಂಬಳ ಸಮಿತಿ ಅಧ್ಯಕ್ಷ ಮುಚ್ಚೂರು ಲೋಕೇಶ ಶೆಟ್ಟಿ ಕಲ್ಕುಡೆ, ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸ್ಯಾಂಕ್ಟಿಸ್, ಪ್ರಮುಖರಾದ ಶಶಿಧರ ಶೆಟ್ಟಿ ಕಲ್ಲಾಪು, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಮತ್ತಿತರರು ಇದ್ದರು.