Saturday, April 26, 2025
Homeಕಾರ್ಕಳಎಂ.ಪಿ.ಎಂ ಸರಕಾರಿ ಕಾಲೇಜು- ಪೋಷಕರ ವೇದಿಕೆ ಸಭೆ

ಎಂ.ಪಿ.ಎಂ ಸರಕಾರಿ ಕಾಲೇಜು- ಪೋಷಕರ ವೇದಿಕೆ ಸಭೆ

ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪೋಷಕರ ವೇದಿಕೆ ಸಭೆಯು ದಿನಾಂಕ 08.03.2025 ರಂದು ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ್ ರೈ ಕೆ ರವರ ಅಧ್ಯಕ್ಷತೆಯಲ್ಲಿ, ಕಾಲೇಜಿನ ಎಲ್ಲಾ ಉಪನ್ಯಾಸಕರ ಉಪಸ್ಥಿತಿಯಲ್ಲಿ ಜರಗಿತು. ಪೋಷಕರ ವೇದಿಕೆಯ ಪ್ರಾಮುಖ್ಯತೆ ಹಾಗೂ ಹೊಣೆಗಾರಿಕೆಗಳ ಜೊತೆಗೆ ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಆಗು ಹೋಗುಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸುಮಾರು 323 ಮಂದಿ ಪ್ರಥಮ ಪದವಿ ವಿದ್ಯಾರ್ಥಿಗಳ ಪೋಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ರವರು ಸಂಸ್ಥೆಯು ಸಾಗುತ್ತಿರುವ ದಾರಿ, ಮಾಡಿರುವ ಸಾಧನೆಗಳು, ಪ್ರಸಕ್ತ ವಿದ್ಯಾಮಾನಗಳು, ವಿದ್ಯಾರ್ಥಿಗಳ ಶಿಸ್ತು, ವ್ಯಕ್ತಿತ್ವ ನಿರ್ಮಾಣ, ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಗಳ ನೆಲೆಯಲ್ಲಿ ಕಾಲೇಜು ಕೈಗೊಂಡ ಕ್ರಮಗಳು, ಭವಿಷ್ಯದ ಯೋಜನೆ, ಯೋಚನೆ ಹಾಗೂ ಆಶೋತ್ತರಗಳ ಬಗ್ಗೆ ಸಮಗ್ರವಾದ ವಿವರಣೆ ನೀಡಿ ಪೋಷಕರು ಈವರೆಗೆ ನೀಡಿರುವ ಬೆಂಬಲವನ್ನು ಪ್ರಶಂಶಿಸಿ ಮುಂದೆಯೂ ಇನ್ನು ಹೆಚ್ಚಿನ ಸಹಕಾರ ನೀಡಿ ಸಂಸ್ಥೆಯ ಪ್ರಗತಿಯಲ್ಲಿ ಕೈಜೋಡಿಸಿ ನೆರವಾಗುವಂತೆ ವಿನಂತಿಸಿದರು.

ಜೊತೆಗೆ ಈ ವರ್ಷ ನಡೆಯಲಿರುವ ಕಾಲೇಜಿನ ನಾಲ್ಕನೇ ಹಂತದ ನ್ಯಾಕ್ ಮೌಲ್ಯಾಂಕಣ ಪ್ರಕ್ರಿಯೆಯಲ್ಲಿ ಪೋಷಕರ ವೇದಿಕೆಯ ಪಾತ್ರ ಹಾಗೂ ಹೊಣೆಗಾರಿಕೆಗಳ ಮನವರಿಕೆ ಮಾಡಿ ಕೊಟ್ಟರು. ವೇದಿಕೆಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಡಾ.ದಿವ್ಯಪ್ರಭು, ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರು ನಡೆಸಿಕೊಟ್ಟರು. 2025-26 ನೇ ಸಾಲಿಗೆ ವೇದಿಕೆ ಅಧ್ಯಕ್ಷರಾಗಿ ರಾಜರಾಮ್ ನಾಯಕ್, ಉಪಾಧ್ಯಕ್ಷರಾಗಿ ಸ್ನೇಹ ಬಳ್ಳಾಳ್, ಕಾರ್ಯದರ್ಶಿಯಾಗಿ ರೂಪ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜೋಸೆಫ್ ಡಿ ಡಿಸೋಜ, ಕೋಶಾಧಿಕಾರಿಯಾಗಿ ಸುಚಿತ್ರ.ಜಿ.ಭಟ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯಶೋದ ಎಸ್ ಎ, ಪಿ ಶೀನ ಮಿಯ್ಯಾರ್, ಸುಧಾಕರ್, ದಿಶಾ ಹಾಗೂ ವಿನೋದ ಸರ್ವಾನುಮತದಿಂದ ಆಯ್ಕೆಯಾದರು.

ಕಾಲೇಜಿನ ಪರವಾಗಿ ಸೌಮ್ಯ, ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರು, ವಿನಯ್, ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಸಂದ್ಯಾ ಭಂಡಾರಿ, ನಿರ್ವಹಣಾ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರು, ಪೋಷಕರ ಕರ್ತವ್ಯ ಹಾಗೂ ಜವಬ್ದಾರಿಗಳ ಬಗ್ಗೆ ವಹಿಸಬೇಕಾದ ಪಾತ್ರದ ಬಗ್ಗೆ, ವಿದ್ಯಾರ್ಥಿಗಳ ಶಿಸ್ತು ನಡವಳಿಕೆಗಳ ಬಗ್ಗೆ ಸಭೆಯಲ್ಲಿ ತಿಳಿಸಿದರು.

ಪ್ರಥಮ ಬಿಕಾಂ ವಿದ್ಯಾರ್ಥಿನಿ ಚೈತ್ರ ಹಾಗೂ ತಂಡದ ಪ್ರಾರ್ಥನೆಗಳೊಂದಿಗೆ ಆರಂಭವಾದ ಸಭೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಡಾ.ಚಂದ್ರಾವತಿ ಸಭೆಯ ಪ್ರಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ಮೈತ್ರಿ ಬಿ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕರಾದ ಡಾ. ಸುಬ್ರಹ್ಮಣ್ಯ ಕೆ.ಸಿ ಸ್ವಾಗತಿಸಿದರು ಹಾಗೂ ಐಕ್ಯೂಎಸಿ ಸಂಚಾಲಕರಾದ ಸುಷ್ಮಾ ರಾವ್ ವಂದಿಸಿದರು.ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular