Saturday, October 5, 2024
Homeಮಂಗಳೂರುಎಂಆರ್ ಪಿಎಲ್ ನಲ್ಲಿ ಕರ್ತವ್ಯ ನಿರತ ಕಾರ್ಮಿಕ 120 ಅಡಿ ಎತ್ತರದಿಂದ ಬಿದ್ದು ಸಾವು

ಎಂಆರ್ ಪಿಎಲ್ ನಲ್ಲಿ ಕರ್ತವ್ಯ ನಿರತ ಕಾರ್ಮಿಕ 120 ಅಡಿ ಎತ್ತರದಿಂದ ಬಿದ್ದು ಸಾವು

ಸುರತ್ಕಲ್: ಎಂಆರ್ ಪಿಎಲ್ ನಲ್ಲಿ ಕರ್ತವ್ಯ ನಿರತ  ಕಾರ್ಮಿಕರೊಬ್ಬರು 120 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಹೈಡ್ರೋಜನ್ ಘಟಕದಿಂದ ನೀರಿನ ಸೋರಿಕೆ  ಸರಿಪಡಿಸಲು ಹೋಗಿ ಈ ಅನಾಹುತ ಸಂಭವಿಸಿದೆ.

ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಾರ್ಖಂಡ್ ಮೂಲದ 38 ವರ್ಷದ ಮಂಗಳ್ ಓರನ್ ಮೃತ ದುರ್ದೈವಿ. ಪ್ರಸ್ತುತ ಜೋಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದ ಇವರು ಎಂಆರ್ ಪಿ ಎಲ್ ನಲ್ಲಿ ಕೆಲಸ ಮಾಡುತ್ತಿದ್ದರು.

120 ಅಡಿ ಎತ್ತರದಲ್ಲಿರುವ ಹೈಡ್ರೋಕ್ಯಾಕರ್ ನಲ್ಲಿ ನೀರಿನ ವೇಗ ಪರಿಶೀಲಿಸಲು ಓರನ್ ತೆರಳಿದ್ದರು.  ಅದನ್ನು ಸರಿಪಡಿಸುವ ವೇಳೆ ನೀರಿನ ಸೋರಿಕೆ ಪ್ರಮಾಣ ಒಮ್ಮೆಲೇ ಹೆಚ್ಚಿದ ಪರಿಣಾಮ ಓರನ್ ಕೆಳಗೆ ಬಿದ್ದಿದ್ದಾರೆ. ಕೂಡಲೇ ಖಾಸಗಿ ಅಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ,  ಅಲ್ಲಿ ಅವರು ಕೊನೆಯುಸಿರೆಳೆದರು ಎಂದು  ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular