ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇತ್ತೀಚಿಗೆ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಭವ್ಯ, ದಿವ್ಯ ವೇದಿಕೆಯಲ್ಲಿ ಶ್ರೀಮತಿ ಶ್ರೀಮತಿ ಚಂದ್ರಶೇಖರ ರವರನ್ನು ಅವರ ಸಮಾಜ ಸೇವೆಯನ್ನು ಗುರುತಿಸಿ “ಕರ್ನಾಟಕ ಸಿರಿಗನ್ನಡ ಸಿರಿ” ರಾಜ್ಯ ಪ್ರಶಸ್ತಿಯನ್ನು ವಿಜೃಂಭಣೆಯ ಸಮಾರಂಭದಲ್ಲಿ ಗಣ್ಯ ಮಾನ್ಯರಿಂದ ಪ್ರದಾನ ಮಾಡಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕಳೆದ 35 ವರ್ಷಗಳಿಂದ ಹಲವಾರು ಸಂಘ -ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಚಂದ್ರಶೇಖರವರು ಮಕ್ಕಳ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾಗಿ, ಕಲಾಕುಂಚ ಮಹಿಳಾ ವಿಭಾಗದ ಪ್ರಥಮ ಅಧ್ಯಕ್ಷರಾಗಿ, ಬ್ರಾಹ್ಮಣ ಮಹಿಳಾ ವಿಭಾಗದ ಕಾರ್ಯದರ್ಶಿಯಾಗಿ, ಶ್ರೀ ಕೃಷ್ಣ ಮಿತ್ರ ವೃಂದದ ಗೌರವ ಅಧ್ಯಕ್ಷರಾಗಿ, ಸಿನಿಮಾಸಿರಿ ನಿರ್ದೇಶಕರಾಗಿ, ಗಾಯಿತ್ರಿ ಪರಿವಾರ, ವಿಮೋಚನಾ ಸಂಘ, ಕನ್ನಡ ಸಾಹಿತ್ಯ ಪರಿಷತ್, ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಾ ದಾವಣಗೆರೆ ಮಹಾನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ 1997 ರಂದು ನಡೆದ ಅಂತರಾಷ್ಟಿçÃಯ ರಾಷ್ಟಿçÃಯ ಯೋಗ ದಿನಾಚರಣೆ ಪ್ರಯುಕ್ತ ಸೂರ್ಯ ನಮಸ್ಕಾರ, ಯೋಗ ಯಜ್ಞ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆಯವರಿಂದ ಸನ್ಮಾನ, ಕರ್ನಾಟಕ ಸಿರಿ ಸಂಘಟನೆಯಿAದ “ಕರ್ನಾಟಕ ಸಮಾಜ ರತ್ನ” ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಇವರಿಗೆ ಕಲಾಕುಂಚ ಸೇರಿದಂತೆ ಹತ್ತು ಹಲವು ಸಂಘ-ಸಂಸ್ಥೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು ಅಭಿಮಾನದಿಂದ ಅಭಿನಂದನೆ ಸಲ್ಲಿಸಿದ್ದಾರೆ.

