Sunday, July 14, 2024
Homeಪುತ್ತೂರುಕು. ಸೌಜನ್ಯ. ಬಿ. ಎಂ. ರವರಿಗೆ ಕನ್ನಡ ಎಂ. ಎ. ಪ್ರಥಮ ರ‍್ಯಾಂಕ್‌

ಕು. ಸೌಜನ್ಯ. ಬಿ. ಎಂ. ರವರಿಗೆ ಕನ್ನಡ ಎಂ. ಎ. ಪ್ರಥಮ ರ‍್ಯಾಂಕ್‌

ಕುಮಾರಿ ಸೌಜನ್ಯ ಬಿ.ಎಂ ರವರು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ಹೆಮ್ಮೆಯ ವಿದ್ಯಾರ್ಥಿನಿಯಾಗಿದ್ದು ಕನ್ನಡ ಎಂ. ಎ. ಯಲ್ಲಿ ಪ್ರಥಮ ರ‍್ಯಾಂಕ್‌ ಜಿಲ್ಲೆಗೆ ತಂದು ಅಪೂರ್ವ ಸಾಧನೆಯನ್ನು ಮಾಡಿದ ಹೆಗ್ಗಳಿಕೆ . 2023-24ನೇ ಶೈಕ್ಷಣಿಕ ಸಾಲಿನಲ್ಲಿ ಈ ವಿಶೇಷ ಸಾಧನೆ ಮಾಡಿದ ಹೆಮ್ಮೆಯ ಸೌಜನ್ಯ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಬಾಬು ಎಂ. ಮತ್ತು ಸುಂದರಿ ಬಿ. ಎಂ. ಇವರ ಪ್ರೀತಿಯ ಪುತ್ರಿ. ಪಠ್ಯದ ಜೊತೆಗೆ ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ. “ಸೌಜನ್ಯ ಹೆಸರಿಗೆ ತಕ್ಕಂತೆ ಸೌಜನ್ಯ ಭರಿತ ಮೃದು ಸ್ವಭಾವದ ಹುಡುಗಿ. ನಮ್ಮ ಸರ್ಕಾರಿ ಕಾಲೇಜಿಗೆ ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಎರಡನೆಯ ಬಾರಿಗೆ ಪ್ರಥಮ ರ‍್ಯಾಂಕ್‌ ಗಳಿಸಿಕೊಟ್ಟ ಸೌಜನ್ಯರ ಸಾಧನೆ ಕಾಲೇಜಿಗೆ ಮೆರುಗನ್ನು ತಂದಿದೆ” ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಬ್ಬಪ್ಪ ಕೈಕಂಬ ತಿಳಿಸಿದರು.

ಇವರು ಚಿಗುರೆಲೆ ಸಾಹಿತ್ಯ ಬಳಗದ ಸಕ್ರೀಯ ಸದಸ್ಯರಾಗಿದ್ದು, ನಿರೂಪಣೆ, ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ. ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ನಡೆಸಿದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ ಅನನ್ಯ ಪ್ರತಿಭೆ. ಈಗಾಗಲೇ ಯುಜಿಸಿ ನೆಟ್ ಪರೀಕ್ಷೆಯಲ್ಲೂ ತೇರ್ಗಡೆ ಹೊಂದಿದ್ದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ಪ್ರಸ್ತುತ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ತೆಂಕಿಲ, ಪುತ್ತೂರು ಇಲ್ಲಿ ಪ್ರಥಮ ವರ್ಷದ ಬಿ.ಎಡ್ ವ್ಯಾಸಂಗ ಮಾಡುತ್ತಿದ್ದಾರೆ.
ಹಾಗೆಯೇ ಸೌಜನ್ಯರ ಸಾಧನೆಯ ಹಿಂದೆ ಶ್ರಮಿಸಿದ ಪ್ರೋತ್ಸಾಹಿಸಿದ ಹೆಮ್ಮೆಯ ಪ್ರಾಧ್ಯಾಪಕ ವೃಂದಕ್ಕೂ ಹೃತ್ಪೂರ್ವಕ ಅಭಿನಂದನೆಗಳು.

RELATED ARTICLES
- Advertisment -
Google search engine

Most Popular