ಭಾರತದ ಕ್ರಿಕೆಟ್ ಜಗತ್ತಲ್ಲಿ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಮಾಜಿ ಕೂಲ್ ಕ್ಯಾಪ್ಟನ್ ಎಂ.ಎಸ್. ಧೋನಿ ದಸರಾ ಸಂಭ್ರಮದ ನಡುವೆ ಹೊಸ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳಿಗೆ ದಸರಾ ಖುಷಿ ಹಂಚಿದ್ದಾರೆ.
ಆರಂಭದಿಂದಲೂ ಹೇರ್ ಸ್ಟೈಲ್‌ಗೆ ಐಕಾನ್ ಆಗಿರುವ ಧೋನಿ ಈಗ ಹೊಸ ಹೇರ್ ಸ್ಟೈಲ್‌ನಲ್ಲಿ ಗಮನ ಸೆಳೆದಿದ್ದಾರೆ. ಹೊಸ ಹೇರ್ ಸ್ಟೈಲ್‌ಗೆ ದೋನಿ ಅಭಿಮಾನಿಗಳು ವಾವ್ಹ್ ಎಂದಿದ್ದಾರೆ.
43ರ ಹರೆಯದ ದೋನಿ ಹದಿಹರೆಯದ ಯುವಕನಂತೆ, ಫಿಲಂ ಹೀರೋನಂತೆ ಈ ಹೇರ್ ಸ್ಟೈಲ್‌ನಲ್ಲಿ ಕಾಣುತ್ತಿದ್ದಾರೆ. 2025ರ ಐಪಿಎಲ್‌ಗೆ ಧೋನಿ ಇದೇ ಲುಕ್‌ನಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ. ಈ ಹೊಸ ಹೇರ್ ಸ್ಟೈಲ್ ಧೋನಿ ಬಗೆಗಿರುವ ಅವರ ಅಭಿಮಾನಿಗಳ ಕ್ರೇಝ್ ಇನ್ನೂ ಹೆಚ್ಚಾಗಬಹುದು. ಧೋನಿಯವರ ಹೇರ್ ಸ್ಟೈಲ್ ಡಿಸೈನರ್ ಆಲಿಮ್ ಹಕೀಂ ಅವರು ಈ ಹೊಸ ವಿನ್ಯಾಸವನ್ನು ರೂಪಿಸಿದ್ದಾರೆ ಎನ್ನಲಾಗಿದೆ. ಸದ್ಯ ಧೋನಿ ಹೇರ್ ಸ್ಟೈಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.