Sunday, March 23, 2025
Homeರಾಜ್ಯಎಂ.ಎಸ್.ಆರ್.ಎಸ್ ಕಾಲೇಜ್, ಶಿರ್ವ: ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್

ಎಂ.ಎಸ್.ಆರ್.ಎಸ್ ಕಾಲೇಜ್, ಶಿರ್ವ: ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್

ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜು, ಶಿರ್ವ ಇಲ್ಲಿ 29/04/24 ರಂದು ಲಯನ್ಸ್ ಕ್ಲಬ್ ಬಪ್ಪನಾಡ್ ಇನ್ಸ್ಫಯರ್ ಇವರ ವತಿಯಿಂದ ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಲಯನ್ ಸುಧೀರ್ ಬಾಳಿಗ, ಅಧ್ಯಕ್ಷರು-ಲಯನ್ಸ್ ಕ್ಲಬ್ ಬಪ್ಪನಾಡ್ ಇನ್ಸ್ಫಯರ್ ಮತ್ತು ಲಯನ್ಸ್ ಕ್ಲಬ್ ಬಪ್ಪನಾಡ್ ಇನ್ಸ್ಫಯರ್ ಇಲ್ಲಿನ ತರಬೇತುದಾರರಾಗಿರುವ ಲಯನ್ ಪ್ರಶಾಂತ್ ಶೆಟ್ಟಿ ಹಾಗೂ ಲಯನ್ ಪುಷ್ಪರಾಜ್ ಚೌಟ ಇವರು ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಯಾಗಿರುವ ಹೇಮಲತಾ ಶೆಟ್ಟಿ ಮತ್ತು ಕಾರ್ಯಕ್ರಮದ ಸಹ ಆಯೋಜಕರು ರಶ್ಮಿ ಇವರು ಉಪಸ್ಥಿತರಿದ್ದರು. ಪ್ರಶಾಂತ್ ಶೆಟ್ಟಿ ಇವರು ವಿದ್ಯಾರ್ಥಿಗಳಿಗೆ ಕೆರಿಯರ್ ಒಪರ್ಚ್ಯುನಿಟಿಸ್ ಆ್ಯಂಡ್ ಪ್ಲೇಸ್ಮೆಂಟ್ ಅವ್ಯೆನ್ಯುಸ್ ಮಾಹಿತಿಯನ್ನು ನೀಡಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದಂತಹ ಅತಿಥಿಗಳಿಗೆ ಕಾಲೇಜಿನ ಧ್ಯೋತಕವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಹರ್ಷಿತಾ ಇವರು ನೆರವೇರಿಸಿದ್ದು ಬಂದಂತಹ ಅತಿಥಿ ಅಭ್ಯಾಗತರನ್ನು ಹೇಮಲತಾ ಶೆಟ್ಟಿ ಸ್ವಾಗತಿಸಿದರು ಹಾಗೂ ಸಹ ಆಯೋಜಕರಾದ ರಶ್ಮಿ ಇವರು ವಂದಿಸಿದರು.

RELATED ARTICLES
- Advertisment -
Google search engine

Most Popular