ಮೂಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ, ಇಲ್ಲಿ 23-04-2024 ರಂದು ಕಾಲೇಜಿನ ಡಿಜಿ ಟೆಕ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕು. ಯಶೋದಾ ಎಲ್ಲೂರು (ಪಿಹೆಚ್.ಡಿ) ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಅವರು ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಕ್ಷೇಮಾಧಿಕಾರಿಯಾದ ಡಾ. ಸೋನಾ ಹೆಚ್.ಸಿ ಹಾಗೂ ಡಿಜಿ ಟೆಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿರುವ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಿಜಿ ಟೆಕ್‌ನ ಉಪಾಧ್ಯಕ್ಷರಾದ ಡಾ.ಸೋನಾ ಹೆಚ್.ಸಿ ಅವರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನಾಡಿದರು. ಕು. ಯಶೋದಾ ಎಲ್ಲೂರು ಡಿಜಿ ಟೆಕ್‌ನ ಲೋಗೊವನ್ನು ಬಿಡುಗಡೆಗೊಳಿಸಿ, ಇದರಲ್ಲಿನ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಮತ್ತು ತರಬೇತಿ ಯೋಜನಾ ಪತ್ರವನ್ನು ವಿತರಣೆ ಮಾಡುವುದರ ಜೊತೆಗೆ ಶೈಕ್ಷಣಿಕ ಜೀವನದ ಜೊತೆಗೆ ಸಾಮಾಜಿಕ ಜಾಲತಾಣದ ಕೌಶಲ್ಯವು ಮುಖ್ಯವೆಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಡಿಜಿ ಟೆಕ್ ಕುರಿತಾಗಿ ವಿದ್ಯಾರ್ಥಿಗಳಾದ ಪೃಥ್ವಿಕ್ ಆಚಾರ್ಯ ಮತ್ತು ಶ್ರೇಯ ಮೂಲ್ಯ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಡಾ. ಮಿಥುನ್ ಚಕ್ರವರ್ತಿ ಇವರು, ಮುಖ್ಯ ಅತಿಥಿಗೆ ಕಾಲೇಜಿನ ಪರವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಪ್ರತೀಕ್ಷಾ ಅವರು ನಿರೂಪಿಸಿ ವೇದ್ಯಾಶ್ರೀ ವಂದಿಸಿದರು.