Saturday, April 26, 2025
Homeಉಡುಪಿಮೂಡನಿಡಂಬೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಶಿಲಾಮಯ ಗುಡಿ ಶೇ. 90ರಷ್ಟು ಕಾಮಗಾರಿ ಪೂರ್ಣ

ಮೂಡನಿಡಂಬೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಶಿಲಾಮಯ ಗುಡಿ ಶೇ. 90ರಷ್ಟು ಕಾಮಗಾರಿ ಪೂರ್ಣ

ಉಡುಪಿ: ಸುಮಾರು 3 ಕೋ. ರೂ ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣ ಗೊಳ್ಳುತ್ತಿರುವ ಬನ್ನಂಜೆ ಮೂಡನಿಡಂಬೂರಿನ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾಮಗಾರಿ ಈಗಾಗಲೇ ಶೇ. 90ರಷ್ಟು ಪೂರ್ಣಗೊಂಡಿದ್ದು ಪ್ರತಿಷ್ಟಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿದೆ.

ಗರ್ಭಗುಡಿ ಸೇರಿದಂತೆ, ಗರ್ಭಗುಡಿಯ ಶಿಲಾಮಯ ಮುಚ್ಚಿಗೆ, ಮುಖ ಮಂಟಪ, ಮುಖ ಮಂಟಪದ ಶಿಲಾಮಯ ಮುಚ್ಚಿಗೆ, ಸುತ್ತುಪೌಳಿಯ ಅಧಿಷ್ಠಾನ, ಸುತ್ತುಪೌಳಿಯ ಗೋಡು, ಸುತ್ತುಪೌಳಿಯ ಆಧಾರ ಬಗಳು ಮತ್ತು ಅದರ ಮುಚ್ಚಿಗೆ, ಬಲಿಕಲ್ಲು ಭಲಿಪೀಠ, ಒಳಾಂಗಣ ಚಪ್ಪಡಿಕಲ್ಲಿನ ಮಗಾರಿಗಳು ಪೂರ್ಣಗೊಂಡಿದೆ. ನೂತನ ಮುದಾಯ ಭವನ (ಭೋಜನಶಾಲೆ) ನಿರ್ಮಾಣವಾಗಬೇಕಾಗಿದೆ. ದೇವಸ್ಥಾನದ ಧಾನ ಸುಬ್ರಹ್ಮಣ್ಯನ ಚತುರ್ಭುಜ ನಮಯ ಮೂರ್ತಿ, ಬಲಬದಿಯಲ್ಲಿ ಜ್ಞಾನೆ ಗೊಳ್ಳಲಿರುವ ಲಕ್ಷ್ಮೀ ಗಣಪತಿ ಬಲಿಮೂರ್ತಿ ಈಗಾಗಲೇ ಸಿದ್ದಗೊಂಡಿದೆ. ದೇವಸ್ಥಾನ ಕಾಷ್ಟಶಿಲ್ಪಗಳು ಪೂರ್ಣಗೊಂಡಿದ್ದು ಹೆಬ್ಬಾಗಿಲು ಇನ್ನಷ್ಟೆ ಆಳವಡಿಸಬೇಕಾಗಿದೆ.

ಎರಡು ದೇವತೆಗಳ ಸನ್ನಿದಾನ ಮೂಡನಿಡಂಬೂರು ನಾಗಬ್ರಹ್ಮಸ್ಥಾನ ಕ್ಷೇತ್ರದಲ್ಲಿ ವರ್ಷದ ಹಿಂದೆ ದೇವರ ಪ್ರೇರಣೆಯಂತೆ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ಇರಿಸಿದಾಗ ಈ ಕ್ಷೇತ್ರದಲ್ಲಿ ಬಹಳ ಹಿಂದಿನ ಕಾಲದಲ್ಲಿ ಸುಬ್ರಹ್ಮಣ್ಯನ ಸನ್ನಿಧಾನವೂ ಇದ್ದು ಆರಾಧನೆಯು ನಡೆಯುತ್ತಿತು ಎನ್ನುವ ವಿಚಾರ ತಿಳಿದು ಬಂದಿದೆ. ಭಗವತ್ ನೂತನ ಪ್ರೇರಣೆಯಂತೆ ಮತ್ತೆ ಪ್ರಸಾದವನ್ನು ನಿರ್ಮಿಸಿ ಸುಬ್ರಹ್ಮಣ್ಯನ್ನು ಪ್ರತಿಷ್ಟಾಪಿಸುವುದೆಂದು ತೀರ್ಮಾನಿಸಲಾಯಿತು. ನಾಗ, ಸುಬ್ರಹ್ಮಣ್ಯ ದೇವತೆಗಳ ಒಂದೇ ಕ್ಷೇತ್ರದಲ್ಲಿ ಸನ್ನಿಹಿತವಾಗಲಿದೆ.

ಭೂದಾನ ಯಜ್ಞಸೇವೆ: ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯ ನೇತೃತ್ವದಲ್ಲಿ ಭಕ್ತರ ಸಹಕಾರದಲ್ಲಿ ದೇವಸ್ಥಾನವು ಪೂರ್ಣಗೊಂಡಿದ್ದು ದೇವಸ್ಥಾನದ ಮುಂದಿನ ಅಭಿವೃದ್ದಿ ಕೆಲಸಗಳು ನಡೆಯಲು ಸ್ಥಳದ ಅಭಾವ ಎದುರಾಗಿದೆ. ಇದರಿಂದ ದೇವಸ್ಥಾನದ ಮುಂಭಾಗದ ಜಾಗವನ್ನು ಖರೀದಿಸುವ ಅನಿವಾರ್ಯತೆ ಇದೆ. ಇದಕೆ ಭಕ್ತರ ಸಹಕಾರ ಅಗತ್ಯವಿದೆ. ಇದೀಗೆ ಭೂದಾನ ಯಜ್ಞ ಸೇವೆಯ ಮೂಲಕ ಸ್ಥಳವನ್ನು ಖರೀದಿಸಿ ದೇವರಿಗೆ ಸಮರ್ಪಿಸಲು ಸೆಮಿತಿ ಮುಂದಾಗಿದೆ. ಈ ಸೇವೆಯ ಮೂಲಕ 1, 2.5, 5ಚದರ ಅಡಿಯಂತೆ ಜಾಗವನ್ನು ಖರೀದಿಸಲು ಭಕ್ತರಿಗೆ ಅವಕಾಶವಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತಸರ ಪ್ರಶಾಂತ್ ಕುಮಾರ್, ಅಧ್ಯಕ್ಷ ಶೇಖರ ಜಿ. ಅಮೀನ್ ಮಠದಬೆಟ್ಟು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular