ಉಡುಪಿ: ಅಭಿಮಾನ್ ಸ್ಪೋರ್ಟ್ಸ್ ಕ್ಲಬ್ ರಾಂಪುರ ವತಿಯಿಂದ 19ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆಯ ಉದ್ಘಾಟನೆ ಮತ್ತು ಬಹುಮಾನ ವಿತರಣಾ ಸಮಾರಂಭ ನಡೆಯಿತು. ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಮಣಿಪಾಲದ ರಕ್ಷಿತಾ ಡಯೋಗ್ನೊಸ್ಟಿಕ್ ಸೆಂಟರ್‌ನ ಅಶೋಕ್ ಕುಮಾರ್ ದೀಪ ಪ್ರಜ್ವಲನೆಗೈದರು. ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ (ರಿ.) ಬೆಂಗಳೂರು ಇದರ ಜಿಲ್ಲಾಧ್ಯಕ್ಷ ಶ್ರೀಧರ್ ಅಮೀನ್, ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಕರ್ವಾಲು, ವೃತ್ತಿ ಕಮ್ಯುನಿಕೇಶನ್ ಅಲೆವೂರ್‌ನ ಸುಂದರ್ ಸೇರಿಗಾರ್ ಮುಖ್ಯ ಅತಿಥಿಗಳಾಗಿದ್ದರು. ಸಂಘದ ಗೌರವಾಧ್ಯಕ್ಷರುಗಳಾದ ದಿನೇಶ್ ಶೆಟ್ಟಿ, ಅಶೋಕ ಶೆಟ್ಟಿಗಾರ್, ಅಧ್ಯಕ್ಷ ಶಂಕರ ಪೂಜಾರಿ, ಉಪಾಧ್ಯಕ್ಷ ಆಶಿತ್ ಶೆಟ್ಟಿಗಾರ್, ಗೌರವ ಸಲಹೆಗಾರ ರಾಘವ ಸೇರಿಗಾರ್ ಉಪಸ್ಥಿತರಿದ್ದರು. ವೆಂಕಟ ಶೆಟ್ಟಿಗಾರ್ ಮಣಿಪಾಲ ಸ್ವಾಗತಿಸಿದರು. ಸುಧಾಮ ನಿರೂಪಿಸಿದರು.