ಯುಗಪುರುಷ ಕಿನ್ನಿಗೋಳಿ ನೇತೃತ್ವದಲ್ಲಿ ಭ್ರಾಮರೀ ಮಹಿಳಾ ಸಮಾಜ (ರಿ.) ಮೆನ್ನಬೆಟ್ಟು- ಕಿನ್ನಿಗೋಳಿ, ರೋಟರಿ ಕ್ಲಬ್ ಕಿನ್ನಿಗೋಳಿ, ಇನ್ನರ್ ಕ್ಲಬ್ ಕಿನ್ನಿಗೋಳಿ, ಲಯನ್ಸ್ ಕ್ಲಬ್ ಕಿನ್ನಿಗೋಳಿ, ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಕಿನ್ನಿಗೋಳಿ,ವಿಜಯ ಕಲಾವಿದರು ಕಿನ್ನಿಗೋಳಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮುದ್ದು ಕ್ರಷ್ಣ ಸ್ಪರ್ಧೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.
ಯುಗಪುರುಷ ಸಂಸ್ಧೆಯ ಶ್ರೀ ಭುವನಾಭಿರಾಮ ಉಡುಪ ದೀಪ ಬೆಳಗಿಸಿ ಉದ್ಘಾಟಿಸಿದರು .
ಓರಿಯಂಟಲ್ ಇನ್ಸೂರೆನ್ಸ್ ಸಂಸ್ಥೆಯ ಯಾಧವ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷರಾದ ಧನಂಜಯ ಶೆಟ್ಟಿಗಾರ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ಮೀರಾ ಶೆಟ್ಟಿ, ಯಕ್ಷಲಹರಿಯ ಅಧ್ಯಕ್ಷರಾದ ರಘುನಾಥ ಕಾಮತ್ ಕೆಂಚನೆಕೆರೆ, ವಿಶ್ವ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಜಗದೀಶ್ ಆಚಾರ್ಯ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸವಿತಾ,ವಿಜಯ ಕಲಾವಿದರು ಸಂಘದ ಅಧ್ಯಕ್ಷರಾದ ಶರತ್ ಶೆಟ್ಟಿ, ತೀರ್ಪುಗಾರರಾದ ಶ್ರೀಮತಿ ಪ್ರೇಮಾ ಭಟ್, ಅಭಿಷೇಕ್ ಶೆಟ್ಟಿ ಐಕಳ, ಬಬಿತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನೂಷ ಕರ್ಕೇರಾ ಸ್ವಾಗತಿಸಿ ರಘುನಾಥ ಕಾಮತ್ ನಿರೂಪಿಸಿ ವಂದಿಸಿದರು.