Saturday, February 15, 2025
Homeಉಡುಪಿಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಮುದ್ದು ಕೃಷ್ಣ-ಮುದ್ದು ರಾಧೆ ಸ್ಪರ್ಧೆ 

ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಮುದ್ದು ಕೃಷ್ಣ-ಮುದ್ದು ರಾಧೆ ಸ್ಪರ್ಧೆ 

ಉಡುಪಿ  ; ಜಯಂಟ್ಸ್   ಗ್ರೂಪ್ ಆಫ್ ಉಡುಪಿ ವತಿಯಿಂದ ಶ್ರೀ  ಕೃಷ್ಣ ಜನ್ಮಾಷ್ಟಮಿ  ಅಂಗವಾಗಿ  ಆ 24  ಶನಿವಾರ ರಂದು  ಮುದ್ದು ಕೃಷ್ಣ  – ಮುದ್ದು ರಾಧೆ  ಸ್ಪರ್ಧೆ ವಾಸುದೇವ ಕೃಪಾ ವಿದ್ಯಾಮಂದಿರ ಆಂಗ್ಲ ಮಾಧ್ಯಮ  ಶಾಲೆ ಬೈಲೂರು  ಉಡುಪಿ ಯಲ್ಲಿ ಜರಗಿತು.

ಸಮಾರಂಭ ವೇದಿಕೆಯಲ್ಲಿ ಕಾರ್ಯಕ್ರಮದ ಪ್ರಾಯೋಜಕತ್ವ ನೀಡಿದ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಯಶವಂತ್ ಸಾಲಿಯಾನ್ ಜಯಂಟ್ಸ್ ಮಾಜಿ ಅಧ್ಯಕ್ಷರಾದ ತೇಜಶ್ವರ ರಾವ್, ರಾಜೇಶ್ ಶೆಟ್ಟಿ, ಕಾರ್ಯದರ್ಶಿ ವಾದಿರಾಜ್ ಸಾಲಿಯಾನ್,ದಿವಾಕರ್ ಪೂಜಾರಿ, ಕಲ್ಯಾಣಿ ಪೈ,ಚಂದ್ರಕಲಾ ಕಾಮತ್  ಉಪಸ್ಥಿತರಿದ್ದರು.                             ಮುದ್ದು ಕೃಷ್ಣ – ಮುದ್ದು ರಾಧೆ  ಸ್ಪರ್ಧೆ  ತೀರ್ಪುಗಾರರಾಗಿ  ನಿಧಿ ಪೈ , ನಿಶಿತಾ  , ವಾದಿರಾಜ್ ಭಟ್  , ರೇಖಾ ಪೈ  ಸಹಕರಿಸಿದರು , ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ  ಪ್ರಥಮ , ದ್ವಿತೀಯ  ,ಬಹುಮಾನ ಗಳನ್ನು    ಕೇಂದ್ರ ಸಮಿತಿಯ  ಸದಸ್ಯ ದಿನಕರ್ ಅಮೀನ್  ವಿತರಿಸಿದರು ,  ಮಕ್ಕಳಿಗೆ ಸಿಹಿ ತಿಂಡಿ , ಉಪಹಾರ ವಿತರಿಸಲಾಯಿತು , ಭಾಗ ವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.                        ಮುಖ್ಯ ಶಿಕ್ಷಕಿ ನಿಷಾ  ಸ್ವಾಗತಿಸಿದರು ಕಾರ್ಯಕ್ರಮದ  ಸಂಯೋಜಕರಾದ  ದೇವದಾಸ್ ಕಾಮತ್ , ಕಾರ್ಯಕ್ರಮ  ನಿರೂಪಣೆ  ಗಣೇಶ್  ಉರಾಲ್ ಶಿಕ್ಷಕ ರಕ್ಷಕ ಸಂಘದ ಸದಸ್ಯರು, ಶಾಲಾ  ಶಿಕ್ಷಕಿಯರೂ, ವಿದ್ಯಾರ್ಥಿಗಳು , ಪೋಷಕರು ಉಪಸ್ಥಿತರಿದ್ದರು.  

RELATED ARTICLES
- Advertisment -
Google search engine

Most Popular