ಕಾರ್ಕಳ: ಪ್ರಜಾಪಿತ ಬ್ರಹ್ಣಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಇದರ ಆಶ್ರಯದಲ್ಲಿ ಪುಲ್ಕೇರಿ ಸಾಣೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ ಜರಗಿತು. ಸಮಾರಂಭದ ಉದ್ಘಾಟನೆಯನ್ನು ಪುಲ್ಕೇರಿಯ ಉದ್ಯಮಿ ಪಿ. ಸುಭಾಸ್ ಕಾಮತ್ ನೆರೆವೇರಿಸಿದರು ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ವಿಜಯ ನಾರಾಯಣ ನಾಯ್ಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಧು ಪಿ.ಕೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಾಣೂರು, ಪ್ರಕಾಶ್ ಪುತ್ರನ್ ಉದ್ಯಮಿಗಳು ಪುಲ್ಕೇರಿ, ಅರುಣ ಕುಮಾರಿ ತಾಲೂಕು ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ, ರೂಪ ಕಾಮತ್ ಯಶೋಧ ಶೆಟ್ಟಿ, ಸಾಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ವಸಂತ, ಸುಮತಿ, ಸತೀಶ್, ಮಂಜುನಾಥ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರು ಸಾಣೂರು, ಪ್ರಿಯಾ, ಅಧ್ಯಕ್ಷರು ಬಾಲವಿಕಾಸ ಸಮಿತಿ, ಅಂಗನವಾಡಿ ಕೇಂದ್ರ ಪುಲ್ಕೇರಿ ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ಪ್ರಜಾಪಿತ ಬ್ರಹ್ಣಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ವಹಿಸಿದ್ದರು. ಅಂಗನವಾಡಿ ಶಿಕ್ಷಕಿ ಸಾಕಮ್ಮ ಹೆಗ್ಡೆ ಸ್ವಾಗತಿಸಿದರು. ಬಿ.ಕೆ. ಅನ್ನಪೂರ್ಣ ಸಂಸ್ಥೆಯ ಪರಿಚಯ ನೀಡಿದರು. ಬಿ.ಕೆ. ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.