ಹೆಬ್ರಿ: ಮುದ್ರಾಡಿಯ ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ, ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಮುಖಾಂತರ ಮಾಹೆ ಮಣಿಪಾಲದ ಸಹಯೋಗದಲ್ಲಿ ಮುದ್ರಾಡಿಯ ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಸಹಕಾರದಲ್ಲಿ ನಡೆಯುತ್ತಿರುವ ಜಿ.ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನೊಂದಾವಣೆ ಅವಧಿಯನ್ನು ಜನವರಿ ೧೦ ರ ತನಕ ವಿಸ್ತರಿಸಲಾಗಿದೆ.
ಹೆಬ್ರಿ ಪೇಟೆಯಲ್ಲಿನ ಗೋಪಾಲ ಭಂಡಾರಿ ಕಚೇರಿ, ಮುದ್ರಾಡಿಯ ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಬ್ಯಾಂಕ್ ಆವರಣ, ಮುನಿಯಾಲು ಮಾತಿಬೆಟ್ಟು ನಾರಾಯಣ ಗುರು ಸಭಾಭವನ ಮತ್ತು ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ನೊಂದಾವಣೆ ನಡೆಯಲಿದೆ ಎಂದು ಮಂಜುನಾಥ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.