Tuesday, January 14, 2025
Homeಮೂಡುಬಿದಿರೆಮೂಡುಬಿದಿರೆ: ಭರತನಾಟ್ಯ ತರಗತಿ ಶುಭಾರಂಭ

ಮೂಡುಬಿದಿರೆ: ಭರತನಾಟ್ಯ ತರಗತಿ ಶುಭಾರಂಭ

ಮೂಡುಬಿದಿರೆ: ಮೂಡುಬಿದಿರೆ ಶ್ರೀದೇವಿ ನೃತ್ಯ ಕೇಂದ್ರ ಮಂಗಳೂರು ಹಾಗೂ ದವಳತ್ರಯ ಜೈನ ಕಾಶಿ ಟ್ರಸ್ಟ್ (ರಿ) ಮೂಡಬಿದಿರೆ. ಶ್ರೀ ದಿಗಂಬರ ಜೈನ ಮಠ ಸಹ ಯೋಗದಲ್ಲಿ ಜ. 5ರಂದು ಬೆಳಗ್ಗೆ 10ಗಂಟೆಗೆ ಭರತನಾಟ್ಯ ತರಗತಿಯನ್ನು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಅವರು ಉದ್ಘಾಟನೆಯನ್ನು ನೆರವೇರಿಸಿದರು.

ಆಶೀರ್ವಾದ ನೀಡಿದ ಸ್ವಾಮೀಜಿ, “ನೃತ್ಯ ಕಲೆಯು ಭಾರತೀಯ ಪ್ರಾಚೀನ ಎಪ್ಪತ್ತೆರಡು ಕಲೆ (64 ಕಲೆ ಅಂತಲೂ ಹೇಳುತ್ತಾರೆ )ಗಳಲ್ಲಿ ಒಂದು ಶಾಸ್ತ್ರೀಯ ನೃತ್ಯ ಅಧಿನಾಥ ತೀರ್ಥoಕರ ಕಾಲದಲ್ಲೇ ಆರಾಧನ ಪದ್ಧತಿ, ಯಾಗಿ ರಾಜರ ಆಸ್ಥಾನದಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಅಂಗಿಕ ಅಭಿನಯ ಮುದ್ರೆ ಹೆಜ್ಜೆಗಳ ಶಾಸ್ತ್ರೀಯ ಪಟ್ಟು ಗಳನ್ನು ಕಲಿತ ನೃತ್ಯಗಾರರು ತಮ್ಮ ಗುರುಗಳಿಂದ ಅಭ್ಯಾಸ ಕಾಲದಲ್ಲಿ ನವರಸಗಳ ಪ್ರಾಮುಖ್ಯತೆ, ಸೌಂದರ್ಯ ಪ್ರಜ್ಞೆ ಶಾಂತ ರಸ ಭಕ್ತಿ ಜ್ಞಾನ ರಸಗಳ ಸೌಂದರ್ಯದ ಮಹತ್ವ ತಿಳಿದು ಪ್ರೇಕ್ಷಕ ವರ್ಗಕ್ಕೆ ನೃತ್ಯ ಅಭಿನಯ ಮೂಲಕ ತಿಳಿಸಿದಾಗ ಭಾರತಿಯ ಕಲೆಯ ಮಹತ್ವ ಹಾಗೂ ಉತ್ತಮ ಕಲಾ ಪ್ರಜ್ಞೆ ಮೂಡಿಸಲು ಸಾಧ್ಯ”ಎಂದು ನುಡಿದರು.

ಸ್ಥಾಪಕ ಟ್ರಸ್ಟಿ ಡಾ. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿ ಶ್ರೀ ಮಠ ಕಲೆ ಸಾಹಿತ್ಯ ಸಂಸ್ಕೃತಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುದು ಸಂತೋಷ ಎಂದರು.

ಗೌರವ ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರ ‘ಸುಸಂಸ್ಕೃತಿಯನ್ನು ತೋರಿಸಲ್ಪಡುವ ಏಕೈಕ ವಿದ್ಯೆ ಶಾಸ್ತ್ರೀಯ ನೃತ್ಯ’ ಎಂದು ತಿಳಿಸಿದರು.

ಶ್ರೀಯುತ ಭುವನಾಭಿರಾಮ ಉಡುಪ ಯುಗಪುರುಷದ ಸಂಪಾದಕರು ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಡಾ. ಆರತಿ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಸಾತ್ವಿಕಾ ರೈ ಪ್ರಾರ್ಥನೆಯನ್ನು ಮಾಡಿದರು. ಟ್ರಸ್ಟಿ ಮಿಥುನ್ ರೈ ಸ್ವಾಗತಿಸಿದರು. ಟ್ರಸ್ಟಿ ಹರೀಶ್ ಶೆಟ್ಟಿ ವಂದಿಸಿದರು ವಿದುಷಿ ನಯನಾ ಕೆ. ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಮೂವತ್ತು ನಿಮಿಷ ಭರತ ನಾಟ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು.

RELATED ARTICLES
- Advertisment -
Google search engine

Most Popular