ಮೂಡುಬಿದಿರೆ : ಜೈನ ಕಾಶಿ ಮೂಡುಬಿದಿರೆ ಯುಗಾದಿ ಪ್ರಯುಕ್ತ 09-04-2024 ಮಂಗಳವಾರ 18ಬಸದಿಗಳಲ್ಲಿ ವಿಶೇಷ ಪೂಜೆ ಶ್ರೀ ಮಠದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ ದೇವ ಶಾಸ್ತ್ರ, ಗುರು ಪೂಜೆ, ಕುಷ್ಮಾಂಡಿನೀ ದೇವಿ ಶೋಡ ಷೋ ಪಚಾರ ಪೂಜೆ ನೆರವೇರಿತು, ಸಂಜೆ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನ ಉಪಸ್ಥಿತಿಯಲ್ಲಿ ಶ್ರೀ ಜೈನ ಮಠದ ವತಿಯಿಂದ ಇತಿಹಾಸ ಪ್ರಸಿದ್ದ ಸಾವಿರ ಕಂಬದ ಬಸದಿ ಭಗವಾನ್ 1008 ಚಂದ್ರನಾಥ ಸ್ವಾಮಿಗೆ ಮಹಾಭಿಷೇಕ ಒಂದು ತಿಂಗಳ ಪರ್ಯಂತ ನಡೆಯುವ ವಸಂತ ಪೂಜೆಗೆ ಚಾಲನೆ ಶ್ರೀ ಬಲಿ ವಿಧಾನ ಸರ್ವಾಹ್ನಯಕ್ಷ ಶ್ರೀ ವಿಹಾರ,ಪಟ್ಟದ ಪುರೋಹಿತ ರಾದ ಪಾರ್ಶ್ವನಾಥ ಇಂದ್ರರಿಂದ ಕ್ರೋಧಿ ನಾಮ ನೂತನ ಸವಸ್ಸರದ ಜ್ಯೋತಿಷ್ಯ ಫಲ ಶ್ರವಣ ಜರುಗಿತು. ಪ.ಪೂ ಸ್ವಾಮೀಜಿ ಆಶೀರ್ವಾದ ನೀಡಿ ಯಾರು ಧರ್ಮ ಶ್ರದ್ದೆ ಪೂಜೆ ದೇವಾದಿ ದೇವ ದರ್ಶನ ದಾನದಿ ಸತ್ಕರ್ಮ ನಿರತರಾದವರಿಗೆ, ಸಾತ್ವಿಕ ಮನೋಭಾವದ ನಿರುಪದ್ರವಿಗಳಿಗೆ ಗ್ರಹ ಕಾಟ ಇರಲಾರದು ಹಾಗಾಗಿ ಎಲ್ಲರೂ ದೈವಿ ಸಂಪತ್ತು ಪಡೆಯಲು ಧರ್ಮ ಕೇಂದ್ರ ಗಳ ದರ್ಶನ ಉತ್ತಮ ಕಾರ್ಯಗಳೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಿ ಷಟ್ ಕ್ರಿಯೆ ದಿನ ನಿತ್ಯ ಕರ್ತವ್ಯದಂತೆ ಆಚರಿಸಿ ಎಂದು ನುಡಿದರು. ಬಸದಿ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್, ಶ್ರೇಯಾಂಶ್, ಅಭಯ ಚಂದ್ರ ಜೈನ್, ಶಂಭವ್ ಕುಮಾರ್ ವ್ಯವಸ್ಥಾಪಕ ಸಂಜಯಂತ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು
ಮೂಡುಬಿದಿರೆ: ಜೈನ ಕಾಶಿಯಲ್ಲಿ ಯುಗಾದಿ ಪ್ರಯುಕ್ತ ವಿಶೇಷ ಪೂಜೆ
RELATED ARTICLES