ಮೂಡುಬಿದಿರೆ: ನ. 14ರಂದು ಇದಮ್ ಪುನರ್ವಸತಿ ಮತ್ತು ಶೈಕ್ಷಣಿಕ ಪ್ರತಿಷ್ಠಾನದ ವತಿಯಿಂದ ಮಕ್ಕಳ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಮಾರಂಭ
ಮೂಡುಬಿದಿರೆ :ಇದಮ್ ಪುನರ್ವಸತಿ ಮತ್ತು ಶೈಕ್ಷಣಿಕ ಪ್ರತಿಷ್ಠಾನ ಮೂಡುಬಿದಿರೆ ವತಿಯಿಂದ ಮಕ್ಕಳ ದಿನಾಚರಣೆ ಮತ್ತು 7ನೇ ವರ್ಷದ ವಾರ್ಷಿಕೊತ್ಸವವು ನವೆಂಬರ್ 14, ಗುರುವಾರ 2024 ರಂದು ಸಂಜೆ 4.30 ರಿಂದ ಸಮಾಜ ಮಂದಿರ, ಮೂಡುಬಿದಿರೆ ಆಚರಿಸಲಾಗುವುದು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಪತಿ ಭಟ್, (ಧನಲಕ್ಷ್ಮೀ ಕ್ಯಾಶುಸ್ ಮೂಡುಬಿದ್ರೆ),
ಬಿಂದಿಯಾ ಶರತ್ ಶೆಟ್ಟಿ, ಅಧ್ಯಕ್ಷರು ಇನರ್ ವೀಲ್ ಕ್ಲಬ್ ಮೂಡುಬಿದಿರೆ(ರಿ.)(IWÇ) ಡಾ. ಬಿ. ರಾಜಶೇಖರ್
ಎಮೆರಿಟಸ್ ಪ್ರೊಫೆಸರ್ (AHS) ಸಂಸ್ಥಾಪಕ ಡೀನ್ (1999-2019) ಮತ್ತು ಪ್ರೊಫೆಸರ್ (Sp.& HG.). ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್, Ln.ಬೊನವೆಂಚರ್ ಮೆನೇಜಸ್ ಅಧ್ಯಕ್ಷರು ಲಯನ್ಸ್ ಕ್ಲಬ್ ಮೂಡುಬಿದಿರೆ, ವಿಜೇತ ಪಿಂಕಿ ಡಿಸೋಜಾ ವಕೀಲರು ಮೂಡುಬಿದಿರೆ ಉಪಸ್ಥಿತರಿರಲಿರುವರು.
ಕಾರ್ಯಕ್ರಮದ ವಿವರ: ಪ್ರಾರ್ಥನೆ, ಮುಖ್ಯ ಅತಿಥಿಗಳನ್ನು ವೇದಿಕೆಯಲ್ಲಿ ಸ್ವಾಗತಿಸುವುದು, ವಾರ್ಷಿಕ ವರದಿ ಮತ್ತು ಪರಿಚಯ, ಸ್ವಾಗತ ಭಾಷಣ, ದೀಪ ಬೆಳಗಿಸುವ ಸಮಾರಂಭ, ಕೇಕ್ ಕಟಿಂಗ್ ನಂತರ ನೃತ್ಯ ಪ್ರದರ್ಶನ ಮತ್ತು ಕ್ರೀಡಾ ಬಹುಮಾನ ವಿತರಣೆ ನಡೆಯಲಿದೆ.