ಬಂಟ್ವಾಳ:ಇಲ್ಲಿನ ಮೂಡುಪಡುಕೋಡಿ ಗ್ರಾಮದ ಕೊಳಲಬಾಕಿಮಾರು ಎಂಬಲ್ಲಿ ಸುಮಾರು ರೂ ೬.೫೦ ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರು ನಿರ್ಮಿಸಿದ ನೂತನ ಅಂಚೆ ಕಚೇರಿ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಭಾನುವಾರ ನಡೆಯಿತು.
ಜ್ಯೋತಿಷ್ಯ ವಿದ್ವಾನ್ ವೆಂಕಟರಮಣ ಮುಚ್ಚಿನ್ನಾಯ ಮತ್ತು ಪುತ್ತೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕ ಹರೀಶ್ ಜಿ. ನೂತನ ಕಟ್ಟಡ ಲೋಕಾರ್ಪಣೆಗೊಳಿಸಿದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ನಾಮಫಲಕ ಅನಾವರಣಗೊಳಿಸಿ ಶುಭ ಹಾರೈಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುಲೋಚನಾ ಜಿ.ಕೆ.ಭಟ್, ಎಂ.ತುಂಗಪ್ಪ ಬಂಗೇರ, ಬಿ.ಪದ್ಮಶೇಖರ ಜೈನ್, ಧವiðಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಹಾಪ್ ಕಾಮ್ಸ್ ನಿರ್ದೇಶಕ ಲಕ್ಷ್ಮೀನಾರಾಯಣ ಉಡುಪ ಮಾತನಾಡಿದರು. ಕಟ್ಟಡ ಸಮಿತಿ ಅಧ್ಯಕ್ಷ ಎಂ.ಬೂಬ ಸಪಲ್ಯ ಮುಂಡಬೈಲು, ಕೃಷಿಕ ಚಂದ್ರಶೇಖರ ಭಟ್, ಪ್ರಮುಖರಾದ ಡಾ.ರಾಮಕೃಷ್ಣ ಎಸ್., ಡಾ.ಶಿವಪ್ರಸಾದ್, ಉದ್ಯಮಿ ಗಿರಿಜಾಶಂಕರ್, ಅಂಚೆಪಾಲಕ ಮಹಮ್ಮದ್ ಖಲೀಲ್, ಅಬ್ದುಲ್ ವಹಾಬ್, ದಿನೇಶ ಮೂಲ್ಯ ಮತ್ತಿತರರು ಇದ್ದರು.
ಮಡಂತ್ಯಾರು ಅಂಚೆ ಮಾಸ್ಟರ್ ಗಣೇಶ ಶೆಟ್ಟಿ ಸ್ವಾಗತಿಸಿ, ಗ್ರಾ.ಪಂ.ಸದಸ್ಯ ದಯಾನಂದ ನಾಯ್ಕ್ ವಂದಿಸಿದರು.
ಮೂಡುಪಡುಕೋಡಿ: ನೂತನ ಅಂಚೆ ಕಚೇರಿ ಕಟ್ಟಡ ಲೋಕಾರ್ಪಣೆ
RELATED ARTICLES