ಉಡುಪಿ: ಹಾವಂಜೆ, ಬೆಳ್ಳಂಪಳ್ಳಿ ಕುಕ್ಕೆಹಳ್ಳಿ ಮುಗ್ಗೇರಿ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಬ್ರಹ್ಮಕುಂಭಾಭಿಷೇಕ. ನೂತನ ಸ್ವಾಗತ ಗೋಪುರ ಉದ್ಘಾಟನೆ, ವಾರ್ಷಿಕ ಧರ್ಮ ನೇಮವು ಮಾ. 26ರಿಂದ ಎ.3ರವರೆಗೆ ನಡೆಯಲಿದೆ.
ಪರಶುರಾಮ ಸೃಷ್ಟಿಯ ತುಳುನಾಡ ಸಂಸ್ಕೃತಿಯು ಇಲ್ಲಿನ ಆರಾಧನ ಪದ್ಧತಿಯಲ್ಲಿ ಬಹಳಷ್ಟು ಅಡಕವಾಗಿದೆ. ಅತ್ತ ದೇವಸ್ಥಾನವು ಅಲ್ಲದ ಇತ್ತ ದೈವಸ್ಥಾನ ಅಲ್ಲದ ಪೂಜಾ ಸ್ಥಳವಾಗಿ ಬೆಳೆದು ಬಂದ ಶ್ರೀ ಬ್ರಹ್ಮಬೈದೆರ್ ಗರೋಡಿಗಳು ಉಡುಪಿ ನಗರದಿಂದ 16 ಕಿ.ಮೀ ದೂರದ ಸ್ವರ್ಣಾ ನದಿಯ ತಟದಲ್ಲಿ ಅನಾದಿ ಕಾಲದಿಂದಲೂ ಹಾವಂಜೆ, ಬೆಳ್ಳಂಪಳ್ಳಿ, ಕುಕ್ಕೆಹಳ್ಳಿ ಗ್ರಾಮದ ಭಕ್ತರು ಆರಾಧಿಸಿಕೊಂಡು ಬಂದಿರುವ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಮುಗ್ಗೇರಿಯಲ್ಲಿ ಪ್ರತಿವರ್ಷ ಕೊಡಿತಿಂಗಳಲ್ಲಿ ಆಗಲು ನೈವೇದ್ಯ ಸೇವೆ, ವಾರ್ಷಿಕ ಧರ್ಮ ನೇಮೋತ್ಸವ, ಪ್ರತಿ ಮಂಗಳವಾರ, ರವಿವಾರ ಪೂಜೆ, ಪ್ರತಿ ತಿಂಗಳು ಸಂಕ್ರಮಣ ಪೂಜೆ, ಸೋಣ ತಿಂಗಳಲ್ಲಿ ಸೋಣಾರ್ತಿ ಸೇವೆ, ನಂದಾ ದೀಪ ಸೇವೆ, ಚೌತಿ ಪೂಜೆ, ಪಂಚ ಕಜ್ಜಾಯ ಸೇವೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ-ಶ್ರದ್ಧೆಯಿಂದ ನಡೆಯುತ್ತಿದೆ.
ಕಳೆದ 12 ವರ್ಷಗಳ ಹಿಂದೆ ಭಕ್ತಾದಿಗಳ ಸಹಾಯದಿಂದ ಸಂಪೂರ್ಣ ಜೀರ್ಣೋದ್ದಾರಗೊಂಡು ಸುಂದರವಾಗಿ ನಿರ್ಮಾಣಗೊಂಡ ಶ್ರೀ ಬ್ರಹ್ಮಬೈದರ್ಕಳ ಗರೋಡಿ, ಇದಕ್ಕೆ ಸಂಬಂಧಪಟ್ಟ ನಾಗಬನ ಪ್ರತಿಷ್ಠೆ ಬ್ರಹ್ಮಕುಂಭಾಭಿಷೇಕ ನಡೆದಿತ್ತು. ಮುಂದೆ ಕೂಡ ಧಾರ್ಮಿಕ ಪರಂಪರೆಯ ಇತಿಹಾಸವುಳ್ಳ ಈ ಗರೋಡಿಯಲ್ಲಿ ದೈವ ಸಾನಿಧ್ಯ, ಶಕ್ತಿ ಸಾನಿಧ್ಯ ಮತ್ತಷ್ಟು ವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಮತ್ತೊಮ್ಮೆ ಬ್ರಹಕುಂಭಾಭಿಷೇಕಕ್ಕೆ ಸಜ್ಜಾಗಿ ನಿಂತಿದೆ ಎಂದು ಆಡಳಿತ ಮೊತ್ತೇಸರ ಸುಧಾಕರ ಶೆಟ್ಟಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಯೆ ಸುರೇಶ ಬಿ. ಶೆಟ್ಟಿ ತಿಳಿಸಿದ್ದಾರೆ.