ಕಾರ್ಕಳ: 2007ರಲ್ಲಿ ವಿಶ್ವ ಹಿಂದೂಪರಿಷತ್ – ಭಜರಂಗದಳ ಹಿರ್ಗಾನ ಘಟಕದಿಂದ ಸ್ಥಾಪನೆಗೊಂಡ ಹಿರ್ಗಾನ, ಮೂರೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸೆ.7ರಂದು ಶನಿವಾರ 18ನೇ ವರ್ಷದ ಗಣೇಶೋತ್ಸವ ನಡೆಯಲಿದೆ. ಹಿರ್ಗಾನ ಗ್ರಾಮದ ಮೂರೂರಿನ ಕೇಂದ್ರ ಸ್ಥಳದಲ್ಲಿ ಶ್ರೀ ಕ್ಷೇತ್ರ ಕುಂದೇಶ್ವರದ ಪ್ರಧಾನ ಅರ್ಚಕ ಶ್ರೀ ಕೃಷ್ಣ ರಾಜೇಂದ್ರ ಭಟ್ ಪೌರೋಹಿತ್ಯದಲ್ಲಿ ಗಣೇಶೋತ್ಸವ ನಡೆಯಲಿದೆ.
ಸೆ.6ರಂದು ಸಂಜೆ 5.30ಕ್ಕೆ ಎಣ್ಣೆಹೊಳೆಯಿಂದ ಶ್ರೀ ದೇವರ ವಿಗ್ರಹದ ಆಗಮನ ನಡೆಯಲಿದ್ದು, ಸಂಜೆ 6ರಿಂದ ಭಕ್ತಿಗೀತೆ, ದೇಶ ಭಕ್ತಿಗೀತೆ, ಗಣೇಶ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಲಿದೆ. ರಾಷ್ಟ್ರೀಯ ಜಾಗೃತಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪಾತ್ರ ಎಂಬ ವಿಚಾರದಲ್ಲಿ ಭಾಷಣ ಸ್ಪರ್ಧೆ ಕೂಡ ನಡೆಯಲಿದೆ.
ಸೆ.7ರಂದು ಬೆಳಿಗ್ಗೆ 7.30ಕ್ಕೆ ಪ್ರತಿಷ್ಠಾ ಪೂಜೆ ನಡೆಯಲಿದೆ. ಬೆಳಿಗ್ಗೆ ಗಂಟೆ 8ಕ್ಕೆ ಪ್ರಾಚ್ಯ ಮತ್ತು ಗ್ರಾಮೀಣ ವಸ್ತು ಪ್ರದರ್ಶನ ಉದ್ಘಾಟನೆಯಾಗಲಿದ್ದು, ಕಾರ್ಕಳ ಜೋಡುರಸ್ತೆಯ ಶಾನ್ ಡೆಂಟಲ್ ಕೇರ್‌ನ ಡಾ. ಶಾಂತಲ ಉದ್ಘಾಟನೆ ನೆರವೇರಿಸಲಿದ್ದಾರೆ. ಮೂರೂರು ಬೊಮ್ಮನಜಡ್ಡು ಮನೆಯ ನಿವೃತ್ತ ಮುಖ್ಯೋಪಾಧ್ಯಾಯರು ಸದಾನಂದ ನಾಯಕ್ ಅವರು ಪ್ರಾಚೀನ ಮತ್ತು ದೇಶ ವಿದೇಶಗಳ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಕುಕ್ಕುಂದೂರು ಕಾರ್ಕಳ ಇದರ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು ಅವರು ಕುಲಕಸುಬುಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ 10ರಿಂದ ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ಭಾರ ಎತ್ತುವುದು ಮತ್ತು ಮೋಜಿನಾಟಗಳು ನಡೆಯಲಿವೆ. ಬೆಳಿಗ್ಗೆ 11ಕ್ಕೆ ಸಾಮೂಹಿಕ ಭಜನೆ ನಡೆದು, ನಂತರ ಮಧ್ಯಾಹ್ನದ ಪೂಜೆ ನಡೆಯಲಿದೆ ಮತ್ತು ಪ್ರಸಾದ ವಿತರಣೆಯಾಗಲಿದ್ದು, ಅನ್ನಸಂತರ್ಪಣೆಯೂ ನಡೆಯಲಿದೆ.
ಮಧ್ಯಾಹ್ನ 12.30ರಿಂದ ಭಾರ್ಗವ ವಿಜಯ ಯಕ್ಷಗಾನ ನಡೆಯಲಿದೆ. 2.45ರಿಂದ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ. ಸಂಜೆ 3.15ಕ್ಕೆ ಧಾರ್ಮಿಕ ಸಭೆ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಸಂಜೆ 4.15ಕ್ಕೆ ಮಹಪೂಜೆ ನಡೆದು, 4.30ರಿಂದ ವಿಸರ್ಜನಾ ಪೂಜೆ ನಡೆಯಲಿದೆ. ಸಂಜೆ 5ರಿಂದ ಭವ್ಯ ಶೋಭಾಯಾತ್ರೆ ನಡೆಯಲಿದ್ದು, 6.30ಕ್ಕೆ ಜಲಸ್ತಂಭನ ನಡೆಯಲಿದೆ.