ಸುರತ್ಕಲ್: ಮಿತ್ರಪಟ್ಣ ಮೊಗವೀರ ಸಂಘ ಹಾಗೂ ಶ್ರೀರಾಮ ಭಜನಾ ಮಂದಿರ ಇವರ ಸಹಭಾಗಿತ್ವದಲ್ಲಿ ಮತ್ತು ಮಿತ್ರಪಟ್ಣ ಮಹಿಳಾ ಸಂಘ ಇವರ ನೇತೃತ್ವದಲ್ಲಿ ಆಗಸ್ಟ್ 8ರಂದು ಶುಕ್ರವಾರ ಸಂಜೆ ಗಂಟೆ 4ಕ್ಕೆ ಮುಕ್ಕ ಶ್ರೀರಾಮ ಭಜನಾ ಮಂದಿರದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ಆಮಂತ್ರಣ ಪತ್ರಿಕೆ ಯನ್ನು ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್ ಶ್ರೀರಾಮ ಭಜನಾ ಮಂದಿರದಲ್ಲಿ ಬಿಡುಗಡೆಗೊಳಿಸಿದರು.
ಮಂದಿರದ ಅರ್ಚಕ ಕಿಶೋರ್ ಕುಮಾರ್ ಶ್ರೀರಾಮ ದೇವರಿಗೆ ಪೂಜೆ ನೆರವೇರಿಸಿ,ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷ ಸುರೇಶ್ ಕರ್ಕೇರ, ಉಪಾಧ್ಯಕ್ಷ ಪುರಂದರ ಬಂಗೇರ, ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್, ಕೋಶಾಧಿಕಾರಿ ಯಶ್ ರಾಜ್ ಕರ್ಕೇರ, ಮಂದಿರದ ಅಧ್ಯಕ್ಷ ಪ್ರದೀಪ್ ಕುಂದರ್, ಉಪಾಧ್ಯಕ್ಷ ಪುಷ್ಪರಾಜ್ ಕರ್ಕೇರ, ಕೋಶಾಧಿಕಾರಿ ಲೋಕೇಶ್ ಬಂಗೇರ, ರಾಜ್ ಕುಮಾರ್ ಕರ್ಕೇರ, ಸುನೀಲ್ ಸಾಲ್ಯಾನ್, ಪ್ರಶಾಂತ್ ಸುವರ್ಣ, ಸತೀಶ್ ಬಂಗೇರ, ಮಾಜಿ ಮಹಿಳಾ ಸಂಘದ ಅಧ್ಯಕ್ಷೆ ಅಹಲ್ಯಾ ಎಸ್.ಕಾಂಚನ್, ಮಂಗಳೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಶೋಭಾ ರಾಜೇಶ್ ಶಕುಂತಳ ಸುರೇಶ್ ಕರ್ಕೇರ, ಉಷಾ ಯಶವಂತ ಪುತ್ರನ್, ಪದ್ಮಾವತಿ ಕೆ. ಕರ್ಕೇರ, ಗೀತಾ ರಾಜ್ ಕುಮಾರ್ ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.