ಮುಕ್ಕ: ಮಾರುತಿ ಸೇವಾ ಸಂಘ(ರಿ,) ಮಾರುತಿ ಸ್ಪೋರ್ಟ್ಸ್ ಕ್ಲಬ್ ಮಿತ್ರಪಟ್ಣ ಮುಕ್ಕ ಇದರ ಆಶ್ರಯದಲ್ಲಿ ವಿದ್ಯಾ ನಿಧಿಯ ಸಹಾಯಾರ್ಥವಾಗಿ ಗ್ರಾಮಿಣ ಮಟ್ಟದ ನಿಗದಿತ ಓವರ್ ಗಳ ಮಾರುತಿ ಟ್ರೋಫಿ 2024ರ ಕ್ರಿಕೆಟ್ ಪಂದ್ಯಕೂಟ ಪಡುಪಣಂಬೂರು ಮುಲ್ಕಿ ಸೀಮೆ ಅರಸು ಕಂಬಳದ ಬಾಕಿಮಾರುಗದ್ದೆಯಲ್ಲಿ ಭಾನುವಾರ ನಡೆಯಿತು.
ಮುಲ್ಕಿ ಸೀಮೆ ಅರಸುಗಳಾದ ಶ್ರೀಯುತ ದುಗ್ಗಣ ಸಾವಂತರು ದೀಪ ಬೆಳಗಿಸಿ ಪಂದ್ಯಕೂಟಕ್ಕೆ ಚಾಲನೆ ನೀಡಿದರು. ಪಂದ್ಯಕೂಟದ ಸಮಾರೋಪದಲ್ಲಿ ಸಂಘದ ವತಿಯಿಂದ ಒಂದು ಲಕ್ಷ ಮೊತ್ತದ ಆರ್ಥಿಕ ಮತ್ತು ವೈದ್ಯಕೀಯ ನೆರವು ಬಡ ಕುಟುಂಬಗಳಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾರುತಿ ಸ್ಪೋರ್ಟ್ ಕ್ಲಬ್ ಅಧ್ಯಕ್ಷ ಕಿಶೋರ್ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಶೋಭಾ ರಾಜೇಶ್, ವಕೀಲರಾದ ಗಂಗಾಧರ ಗುರಿಕಾರ ಹೊಸಬೆಟ್ಟು , ಮೊಗವೀರ್ಸ್ ಬಹರೈನ್ ನ ಉಪಾಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್, ಶ್ರೀರಾಮ ಭಜನಾ ಮಂದಿರ ಪ್ರಧಾನ ಕಾರ್ಯದರ್ಶಿ ಯಜ್ಞೇಶ್ ಕರ್ಕೇರ ಮಿತ್ರಪಟ್ಣ, ಮಿತ್ರಪಟ್ಣ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ್ ಸುವರ್ಣ, ಮಿತ್ರಪಟ್ಣ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್, ಶರತ್ ಬಂಗೇರ, ಲೋಕೇಶ್ ಕರ್ಕೇರ, ರಮೇಶ್ ಪೂಜಾರಿ, ಜಗನ್ನಾಥ್ ಸಸಿಹಿತ್ಲು ಉಪಸ್ಥಿತರಿದ್ದರು. ಪುರುಷೋತ್ತಮ ಸುವರ್ಣ ಸ್ವಾಗತಿಸಿದರು, ವಿನಯ್ ಉದ್ಯಾವರ ವಂದಿಸಿದರು.