ಮುಲ್ಕಿ : ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ 2023-24ನೇ ಸಾಲಿನ ಸಭೆಯು ಶುಕ್ರವಾರ ಸಂಘದ ಆವರಣದಲ್ಲಿ ನಡೆಯಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪದ್ಮಿನಿ ವಿಜಯಕುಮಾರ್ ಶೆಟ್ಟಿ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಯಲ್ಲಿ ಹೈನುಗಾರರ ಪಾತ್ರ ಮಹತ್ವದ್ದಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಆಡಳಿತದ ಮೂಲಕ ಹೈನುಗಾರರಿಗೆ ಸರಕಾರದ ಸವಲತ್ತುಗಳನ್ನು ದೊರಕಿಸಿಕೊಡಲು ಶ್ರಮ ವಹಿಸಲಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸಂದೀಪ್ ರವರು ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡಿ ಸ್ವಚ್ಛತೆ ಶಿಸ್ತು ಬದ್ಧ ಹೈನುಗಾರಿಕೆಯಿಂದ ಹೆಚ್ಚಿನ ಲಾಭವಿದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಪ್ರಫುಲ್ಲಾ ಸಿ ಶೆಟ್ಟಿ, ನಿರ್ದೇಶಕರಾದ ಶೋಭಾ ವಿ. ಶೆಟ್ಟಿ, ಲೀಲಾ ಎಸ್ ಶೆಟ್ಟಿ, ಬೇಬಿ ಕೆ, ಶೋಭಾ ಎ ಶೆಟ್ಟಿ, ವನಿತಾ ಬಿ ಶೆಟ್ಟಿ ಗುಲಾಬಿ ಕೆ ಪೂಜಾರಿ ವತ್ಸಲ ಶೆಟ್ಟಿ, ಕಾರ್ಯದರ್ಶಿ ಮಮತಾ ಅನಿಲ್ ಶೆಟ್ಟಿ, ಹಾಲು ಪರೀಕ್ಷಕಿ ಅಶ್ವಿನಿ ಪಾಂಡುರಂಗ ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿನಿ ಸ್ವಾಗತಿಸಿದರು, ಪ್ರಫುಲ್ಲ ಸಿ ಶೆಟ್ಟಿ ಧನ್ಯವಾದ ಅರ್ಪಿಸಿದರು ಮಮತಾ ಅನಿಲ್ ಶೆಟ್ಟಿ ನಿರೂಪಿಸಿದರು
ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ಸಂಘದ ಸದಸ್ಯರಿಗೆ ಶೇಕಡ 21 ಡಿವಿಡೆಂಟ್ ವಿತರಿಸಲಾಯಿತು, ಹಾಗೂ ಸಂಘಕ್ಕೆ ಅತಿ ಹೆಚ್ಚು ಹಾಲು ಹಾಕಿದ ವಿಜಯ ಆರ್ ಶೆಟ್ಟಿ(ಪ್ರ), ಜಯಶ್ರೀ ಶೆಟ್ಟಿ(ದ್ವಿ), ಹರಿಣಾಕ್ಷಿ(ತೃ) ಹಾಗೂ ಹೆಚ್ಚು ಕ್ವಾಲಿಟಿಯ ಹಾಲು ಹಾಕಿದ ಯಶೋದಾ ಟಿ ರವರಿಗೆ ಬಹುಮಾನ ನೀಡಿ ಗೌರವಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.