ಮುಲ್ಕಿ: ಧಾರ್ಮಿಕ ಕ್ಷೇತ್ರದಲ್ಲಿ ಭಾಗಿಯಾಗಿ ಅವಿರತ ಪರಿಶ್ರಮದಿಂದ ಉನ್ನತ ಸಾಧನೆ ಅಭಿನಂದನೀಯ ಎಂದು ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಹೇಳಿದರು
ಅವರು ಮುಲ್ಕಿ ಸಮೀಪದ ಕೊಲಕಾಡಿ ಪದ್ಮಶ್ರೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಕಾಶವಾಣಿಯ ಅತ್ಯುನ್ನತ ಶ್ರೇಣಿಯ ಗೌರವಕ್ಕೆ ಪಾತ್ರರಾದ ನಾಗಸ್ವರ ವಾದಕ ವಿದ್ವಾನ್ ನಾಗೇಶ್ ಬಪ್ಪನಾಡು ರವರನ್ನು ಗೌರವಿಸಿ ಮಾತನಾಡಿದರು.
ಕೊಲಕಾಡಿ ಪದ್ಮಶ್ರೀ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಆಶೀರ್ವಚನ ನೀಡಿ ಸಾಧನೆ ನಿರಂತರವಾಗಿ ನಡೆಯಲಿ ಎಂದರು.
ಈ ಸಂದರ್ಭ ವಿದ್ವಾನ್ ನಾಗೇಶ್ ಬಪ್ಪನಾಡು ಪತ್ನಿ ಶ್ರೀಲತಾ ರವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಅಚ್ಯುತ ರಾವ್ ಪಾವಂಜೆ ಸುರತ್ಕಲ್ ಮಣಿಕೃಷ್ಣ ಅಕಾಡೆಮಿಯ ನಿತ್ಯಾನಂದರಾವ್, ವೇದಮೂರ್ತಿ ಶ್ರೀಕಾಂತ್ ಭಟ್ ಕೊಲಕಾಡಿ, ರಂಗಕರ್ಮಿ ಚಂದ್ರಶೇಖರ ಸುವರ್ಣ,
ಗುರುಪ್ರಸಾದ್, ಟ್ರಸ್ಟ್ ನ ಶಶಿಕಲಾ ಉಪಾಧ್ಯಾಯ, ಡಾ.ಶ್ರೀವತ್ಸ ಉಪಾಧ್ಯಾಯ ಮತ್ತಿತರರು ಉಪಸ್ಥಿತರಿದ್ದರು
ಟ್ರಸ್ಟ್ ನ ಅಧ್ಯಕ್ಷ ವಾದಿರಾಜ ಉಪಾಧ್ಯಾಯ ಸ್ವಾಗತಿಸಿ ನಿರೂಪಿಸಿದರು.