ಮುಲ್ಕಿ: ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ನಾಲೂರು ಪ್ಲಾಟ್ ಬಳಿ ಸುಮಾರು 200 ಮೀಟರ್ ಬಿಎಸ್ಎನ್ಎಲ್ ಆಪ್ಟಿಕಲ್ ಫೈಬರ್ ಕೇಬಲ್ ಹಾಗೂ ಎರಡು ಕಡೆ ಅಳವಡಿಸಿದ್ದ ಕನೆಕ್ಷನ್ ಬಾಕ್ಸ್ ಗಳನ್ನು ಕಳವು ಮಾಡಿರುವ ಬಗ್ಗೆ ಮುಲ್ಕಿ ಬಿಎಸ್ಎನ್ಎಲ್ ನ ವೈಭವ್ ನೆಟ್ ಸರ್ವಿಸಸ್ ಮಾಲಕ ಉಮೇಶ್ ಮಾನಂಪಾಡಿ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಎಸ್ಎನ್ಎಲ್ ಕೇಬಲ್ ಹಾಗೂ ಕನೆಕ್ಷನ್ ಬಾಕ್ಸ್ ಗಳನ್ನು ಕಳುವು ಮಾಡಿದ್ದರಿಂದ ಆ ಪ್ರದೇಶದ ಹಿರಿಯ ನಾಗರಿಕರಿಗೆ ಹಾಗೂ ಸರಕಾರಿ ಆಸ್ಪತ್ರೆಗೆ ಬಿಎಸ್ಎನ್ಎಲ್ ಸಂಪರ್ಕವು ಕಡಿತಗೊಂಡಿದ್ದು ತುಂಬಾ ತೊಂದರೆ ಆಗಿರುವುದೇ ಅಲ್ಲದೆ ವೈಭವ್ ನೆಟ್ ಸರ್ವಿಸಸ್ ಉದ್ಯಮಕ್ಕೆ ನಷ್ಟ ಉಂಟಾಗಿದ್ದು.
ಕೂಡಲೇ ಮುಲ್ಕಿ ಪೊಲೀಸರು ಕಳವು ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.