Wednesday, July 24, 2024
Homeಶಿಕ್ಷಣಮುಲ್ಕಿ: ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

ಮುಲ್ಕಿ: ಸರಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

ಮುಲ್ಕಿ: ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಕ್ಯಾಪ್ಸ್ ಫೌಂಡೇಶನ್ ಇವರು ಸರಕಾರಿ ಶಾಲಾ ಮಕ್ಕಳಿಗೆ ನೀಡುವ ಉಚಿತ ನೀರಿನ ಬಾಟಲ್ ವಿತರಣೆಯು ಕೆರೆಕಾಡು ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹೇಮನಾಥ, ಮುಲ್ಕಿ ಅರಮನೆಯ ಟ್ರಸ್ಟ್‌ ನ ಗೌತಮ್ ಜೈನ್‌, ಗ್ರಾಮ ಪಂಚಾಯತ್‌ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ತುಳಸಿ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಗೀತಾ ಗಣೇಶ್, ಎಸ್ ವಿ ಕಮ್ಯುನಿಕೇಶನ್ ಇದರ ಮಾಲಕರಾದ ನಾಗರಾಜ್ ಭಟ್, ತೋಕೂರು ಯುವಕ ಸಂಘದ ಮಾಜಿ ಅಧ್ಯಕ್ಷರಾದ ದಾಮೋದ‌ರ್ ಶೆಟ್ಟಿ,ದುರ್ಗಾ ಶಕ್ತಿ ಮಹಿಳಾ ಮಂಡಲದ ಕಾರ್ಯದರ್ಶಿ ತಿಲೋತ್ತಮ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋಹಿನಿ. ಮುಖ್ಯೋಪಾಧ್ಯರಾದ ಶಶಿಕಲ, ಮತ್ತು ಇರ್ಷಾದ್ ಉಪಸ್ಥಿತರಿದ್ದರು. ಶಿಕ್ಷಕರದ ನವೀನ್ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

RELATED ARTICLES
- Advertisment -
Google search engine

Most Popular