ಮುಲ್ಕಿ:ಕಂಬಳ ತುಳುನಾಡಿನ ಮನೋರಂಜನಾ ಕ್ರೀಡೆ, ಜೊತೆಗೆ ಧಾರ್ಮಿಕ ನಂಬಿಕೆಯಿಂದ ಕೂಡಿದೆ, ಇದು ತುಳುನಾಡಿನ ಸಂಸ್ಕೃತಿ ಸಂಪ್ರದಾಯವಾಗಿದೆ, ಅರಸು ಪರಂಪರೆಯಿಂದ ನೂರಾರು ವರ್ಷಗಳಿಂದ ಈ ಕಂಬುಳ ನಡೆದುಕೊಂಡು ಬಂದಿರುವುದು ಅಭಿನಂದನೀಯ ಮುಂದಿನ ಪೀಳಿಗೆಗೆ ಇದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು, ಇದರಿಂದ ಸಮಾಜಕ್ಕೆ
ಆಗುವ ಪ್ರಯೋಜನದ ಬಗ್ಗೆ ತಿಳಿಹೇಳಬೇಕು ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು
ಅವರು ಮುಲ್ಕಿ ಸೀಮೆ ಅರಸು ಕಂಬಳದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಬೆಳಿಗ್ಗೆ ಅರಮನೆಯ ನಾಗಬನದಲ್ಲಿ ವೆಂಕಟರಾಜ ಉಡುಪ ಅತ್ತೂರು ಬೈಲು ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ,
ಅರಮನೆಯ ಚಂದ್ರನಾಥ ಸ್ವಾಮಿ, ಮತ್ತು ಪದ್ಮವತಿ ಅಮ್ಮನವರ ಬಸದಿಯಲ್ಲಿ ಪೂಜೆ ನಡೆದು ನಂತರ ಅರಮನೆಯ ಜಟ್ಟಿ ಎತ್ತುಗಳು ಮತ್ತು ಎರುಬಂಟ ಸಹಿತ ಕಂಬಳ ಕರೆಗೆ ಬಂದು ಶಿಮಂತೂರು ಆದಿಜನಾರ್ದನ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಮೈಸೂರು ಚಾಮುಂಡೇಶ್ವರೀ ದೇವಸ್ಥಾನದ ಪ್ರಸಾದವನ್ನು ಕಂಬಳದ ಕರೆಗೆ ಹಾಕಿ ಕಂಬಳಕ್ಕೆ ಚಾಲನೆ ನೀಡಲಾಯಿತು. ಅರಮನೆಯ ಧರ್ಮಚಾವಡಿಯಲ್ಲಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ನೇತೃತ್ವದಲ್ಲಿ ವಿವಿಧ ಸಂಪ್ರದಾಯಗಳು ನಡೆದವು.
ನಂತರ ಧಾರ್ಮಿಕ ಸಭಾಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪಂಜ ಬಾಸ್ಕರ ಭಟ್, ವೈ ಗಣೇಶ್ ಭಟ್ ಏಳಿಂಜೆ, ಶಾಸಕ ಉಮಾನಾಥ ಕೋಟ್ಯಾನ್, ಬಪ್ಪನಾಡು ದೇವಳದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ , ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್ ,ಕಂಬಳ ಸಮಿತಿ ಅಧ್ಯಕ್ಷ ಕಿರಣ್ ಶೆಟ್ಟಿ ಕೊಲ್ನಾಡುಗುತ್ತು, ಹಳೆಯಂಗಡಿ ಪ್ರಿಯದರ್ಶಿನಿ ಕೊ ಅಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್,
ನಟ ಅಶ್ವಥ್, ನಿರೂಪಕಿ ಶ್ವೇತ ಆಚಾರ್ಯ, ವಕೀಲರಾದ ಚಂದ್ರಶೇಖರ್ ಕಾಸಪ್ಪಯ್ಯನವರ ಮನೆ, ಸುವರ್ಣ ಮೂಲಸ್ಥಾನದ ಸುಚೀಂದ್ರ ಅಮೀನ್,ಗುರುರಾಜ ಎಸ್ ಪೂಜಾರಿ, ವಿನೋದ್ ಸಾಲ್ಯಾನ್ ಬೆಳ್ಳಾಯರು ಜಯಕೃಷ್ಣ ಕೋಟ್ಯಾನ್, ವಾಸುದೇವ ಶೆಣೈ , ಮೋಹನ ದಾಸ್, ಉಮೇಶ್ ಪೂಜಾರಿ, ಹರಿಪ್ರಸಾದ್, ಚಂದ್ರಹಾಸ ಕೋಟ್ಯಾನ್ ಪಡುತೋಟ, ಧರ್ಮಾನಂದ ಶೆಟ್ಟಿಗಾರ್, ಮುಲ್ಕಿ ಅರಮನೆಯ ಆಶಲತಾ,ಗೌತಮ್ ಜೈನ್ , ರಕ್ಷಾ ಎಂ, ಪವಿತ್ರೇಶ್ ಜೈನ್, ಬಂಕಿ ನಾಯಕರು, ಶ್ಯಾಮ್ ಪ್ರಸಾದ್, ಕಿಶೋರ್ ಸಾಲಿಯಾನ್ , ರಂಗನಾಥ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಗೀತಾಂಜಲಿ ಸುವರ್ಣ, ಸಂಪಾದಕ ಕೃಷ್ಣ ಭಟ್, ಅಶೋಕ್, ಮಾಧವ ಎಂ ಉತ್ರುಂಜೆ, ಸವಿತಾ ಶರತ್ ಬೆಳ್ಳಾಯರು, ಸುನೀಲ್ ಅಳ್ವ, ಭುವನಾಭಿರಾಮ ಉಡುಪ, ನವೀನ್ ಪುತ್ರನ್, ಸಾಹುಲ್ ಅಮೀದ್ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ನಿರೂಪಿಸಿದ