Sunday, July 14, 2024
Homeಮುಲ್ಕಿಮುಲ್ಕಿ: ಡಾ. ಶ್ರೀವತ್ಸ ಉಪಾಧ್ಯಾಯರವರ ಸಾಧನೆ ಅಭಿನಂದನೀಯ

ಮುಲ್ಕಿ: ಡಾ. ಶ್ರೀವತ್ಸ ಉಪಾಧ್ಯಾಯರವರ ಸಾಧನೆ ಅಭಿನಂದನೀಯ

ಶಿಕ್ಷಣ, ಧಾರ್ಮಿಕ ಕ್ಷೇತ್ರದ ಜೊತೆಗೆ ಸಾಮಾಜಿಕ ರಂಗಗಳಲ್ಲಿ ಡಾ. ಶ್ರೀವತ್ಸ ಉಪಾಧ್ಯಾಯ ರವರ ಸಾಧನೆ ಅಭಿನಂದನೀಯ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸುತಜ್ಞ ಹಾಗೂ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಧಾರ್ಮಿಕ ಕ್ಷೇತ್ರದ ಸಾಧನೆಗೆ ಗ್ರೇಟ್ ಇಂಡಿಯಾ ಪಾರ್ಲಿಮೆಂಟ್ ಅವಾರ್ಡ್ 2024 ಮತ್ತು ಲಂಡನ್ ಬುಕ್ ಆಫ್ ರೆಕಾರ್ಡ್ ಪುರಸ್ಕೃತರಾಗಿ ಜ್ಯೋತಿಷ್ಯ ವಿಭಾಗದಲ್ಲಿ ಪ್ರಶ್ನ ಮಾರ್ಗಂ ಮತ್ತು ಬೃಹಜ್ಮಾತಕ ಪ್ರಬಂಧಕ್ಕೆ ಪುಣೆ ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪಡೆದ ಕೊಲಕಾಡಿ ಡಾ. ಶ್ರೀವತ್ಸ ಉಪಾಧ್ಯಾಯ ರವರನ್ನು ಕೊಲಕಾಡಿಯ ಪದ್ಮಶ್ರೀ ನಿಲಯದಲ್ಲಿ ತಮ್ಮ ಆಶ್ರಮದ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಈ ಸಂದರ್ಭ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್ ಸಂಚಾಲಕರಾದ ಗುರುಪ್ರಸಾದ್ ಭಟ್ ಮುಂಡ್ಕೂರು, ಪುನೀತ್ ಕೃಷ್ಣ, ವೇದಮೂರ್ತಿ ವಾದಿರಾಜ ಉಪಾಧ್ಯಾಯ. ಕೊಲಕಾಡಿ, ಶಶಿಕಲಾ ಉಪಾಧ್ಯಾಯ, ಶ್ರೀ ವಿದ್ಯಾ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವೇದಮೂರ್ತಿ ವಾದಿರಾಜ ಉಪಾಧ್ಯಾಯ ದಂಪತಿಗಳನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು ಆಶ್ರಮದ ಸಂಚಾಲಕ ಗುರುಪ್ರಸಾದ್ ಭಟ್ ಸ್ವಾಗತಿಸಿದರು, ಪುನೀತ್ ಕೃಷ್ಣ ಧನ್ಯವಾದ ಅರ್ಪಿಸಿದರು ಶ್ರೀವಿದ್ಯಾ ನಿರೂಪಿಸಿದರು.

RELATED ARTICLES
- Advertisment -
Google search engine

Most Popular