ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವದ ಪ್ರಯುಕ್ತ ಶ್ರೀದೇವರ ಉತ್ಸವ ಬಲಿ ಹಾಗೂ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಕ್ಷೇತ್ರದ ತಂತ್ರಿಗಳಾದ ಶಿಬರೂರು ಗೋಪಾಲಕೃಷ್ಣ ತಂತ್ರಿ ಹಾಗೂ ಅರ್ಚಕ ಮಧುಸೂದನ ಆಚಾರ್ಯ ನೇತೃತ್ವದಲ್ಲಿ ವಿಶೇಷ ಪ್ರಾರ್ಥನ, ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ, ಶ್ರೀ ದೇವರ ರಥಾರೋಹಣ, ಮಹಾ ಅನ್ನಸಂತರ್ಪಣೆ ನಡೆಯಿತು
ರಾತ್ರಿ ಬಯನ ಬಲಿ, ಶ್ರೀ ಭೂತ ಬಲಿ, ಶಯನ, ಕವಾಟ ಬಂಧನ ನಡೆಯಿತು
ಈ ಸಂದರ್ಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ,ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗುರುರಾಜ್ ಎಸ್ ಪೂಜಾರಿ,ಮಾಜೀ ಅಧ್ಯಕ್ಷ ಹರಿದಾಸ್ ಭಟ್ ಹಾಗೂ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು
ಡಿ. 8 ಶನಿವಾರ ಬೆಳಿಗ್ಗೆ ಕವಾಟೋದ್ಘಾಟನೆ, ತುಲಾಭಾರ ಸೇವೆ ರಾತ್ರಿ ಯಾತ್ರಾ ಬಲಿ, ಓಕುಳಿ, ರಥೋತ್ಸವ, ಕಾಂತೇರಿ ಧೂಮಾವತಿಯ ಗಗ್ಗರ ಸೇವೆ, ಧ್ವಜಾವರೋಹಣ ನಡೆಯಲಿದೆ
ಮುಲ್ಕಿ:ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಜೃಂಭಣೆಯ ರಥೋತ್ಸವ
RELATED ARTICLES