Thursday, July 25, 2024
Homeರಾಜ್ಯಮುಲ್ಕಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಸ್ಥಾಪನಾ ದಿನಾಚರಣೆ

ಮುಲ್ಕಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಸ್ಥಾಪನಾ ದಿನಾಚರಣೆ

ಮುಲ್ಕಿ: ಹಳೆಯಂಗಡಿಯ ಪ್ರತಿಷ್ಠಿತ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಸ್ಥಾಪನಾ ದಿನಾಚರಣೆ ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷರಾದ ಎಚ್. ವಸಂತ್ ಬೆರ್ನಾಡ್ ವಹಿಸಿ ಮಾತನಾಡಿ ಗ್ರಾಹಕರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಂಘ ಶ್ರೇಯೋಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಹೆಬ್ರಾನ್ ಅಸೆಂಬ್ಲಿ ಪೆಂಟ ಕೋಸ್ತಲ್ ಚರ್ಚ್ ನ ಪಾಸ್ಟರ್ ಐ ಡಿ ಪ್ರಸನ್ನ ಮಾತನಾಡಿ ಸೇವಾ ಸಂಸ್ಥೆಗಳು ಪ್ರಾಮಾಣಿಕತೆ ಹಾಗೂ ಕಾರ್ಯದಕ್ಷತೆ ಮೂಲಕ ಗ್ರಾಹಕರ ಭರವಸೆಗಳನ್ನು ಈಡೇರಿಸಿದರೆ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಿದ್ದು ಸೊಸೈಟಿಯ ಅಭಿವೃದ್ಧಿಯು ಮೂಲ ಮಂತ್ರವಾಗಲಿ ಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಮುಲ್ಕಿ ಉಪ ತಹಶಿಲ್ದಾರ್ ದಿಲೀಪ್ ರೋಡ್ಕರ್, ಸಂಘದ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಉಮಾನಾಥ ಜಿ ಶೆಟ್ಟಿಗಾರ್, ಗಣೇಶ ಅಮೀನ್ ಸಂಕಮಾರ್, ಗೌತಮ್ ಜೈನ್ ವಿಜಯಕುಮಾರ್ ಸನಿಲ್ ಮಿರ್ಜಾ ಅಹಮದ್ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು. ಶಾಖ ಪ್ರಬಂಧಕರಾದ ಅಕ್ಷತಾ ನಿರೂಪಿಸಿದರು.

RELATED ARTICLES
- Advertisment -
Google search engine

Most Popular